ಮಂಗಳೂರು: ಮುಸ್ಲಿಂ ಹುಡುಗರ ಜತೆ ಹಿಂದೂ ವಿದ್ಯಾರ್ಥಿನಿಯರ ಸುತ್ತಾಟ
ಮುಸ್ಲಿಂ ಹುಡುಗರ ಜತೆ ಹಿಂದೂ ವಿದ್ಯಾರ್ಥಿನಿಯರ ಸುತ್ತಾಟ

ಮಂಗಳೂರು: ಸೋಮೇಶ್ವರ ಬೀಚ್ ನಲ್ಲಿ ಗುರುವಾರ ಸಂಜೆ ಮುಸ್ಲಿಂ ಯುವಕರ ಜತೆ ಮೂವರು ಹಿಂದೂ ಯುವತಿಯರು ವಾಯು ವಿಹಾರ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಹಲ್ಲೆಗೊಳಗಾದವರು ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮುಸ್ಲಿಂ ವಿದ್ಯಾರ್ಥಿಗಳ ಜತೆಗೆ ಹಿಂದೂ ಹುಡುಗಿಯರು ಸೇರಿಕೊಂಡು ವಾಯು ವಿಹಾರಕ್ಕೆ ಬಂದಿದ್ದರು. ಇದನ್ನು ಅರಿತು ಅವರನ್ನೇ ಫಾಲೋ ಮಾಡಿದ ಕೆಲವರು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಕೆಲವರು ಅವರಿಗೆ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!