ಮಂಗಳೂರು: 17 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ - ಅನಾರೋಗ್ಯ ಹಿನ್ನೆಲೆ ಬೇಲ್
17 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ - ಅನಾರೋಗ್ಯ ಹಿನ್ನೆಲೆ ಬೇಲ್

ಮಂಗಳೂರು : ಪ್ರಕರಣವೊಂದರಲ್ಲಿ 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು, ಸಂಜೆ ವೇಳೆ ಬೇಲ್ ನೊಂದಿಗೆ ಬಿಡುಗಡೆ ಮಾಡಲಾಗಿದೆ.

420 ಕೇಸ್ ನ ಬಂಧಿತ ಆರೋಪಿಯನ್ನು, ಬಂಟ್ವಾಳದ ಮೇರಮಜಲು ಪಕ್ಕಾಲ ಪಡೆ ನಿವಾಸಿ ಜೇಸನ್ ಪೀಟರ್ ಡಿಸೋಜ (42) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೂ ಸಿಗದೇ ತಲೆ ಮರೆಸಿಕೊಂಡಿದ್ದ. ನ್ಯಾಯಾಲಯವು LPC ಪ್ರಕರಣ ಎಂದು ವಾರಂಟ್ ಹೊರಡಿಸಿತ್ತು. ಎಸಿಪಿ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ನಡುವೆ ಪೀಟರ್ ಡಿಸೋಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಬೇಲ್ ಸಿಕ್ಕಿದೆ ಎನ್ನಲಾಗಿದೆ. ಪೀಟರ್ ಪರ ಅಡ್ವಕೇಟ್ ಕಿಶೋರ್ ಡಿಸಿಲ್ವ ವಾದಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!