ಇನ್ಮೇಲೆ ಕರೆಂಟ್‌  ಫ್ರೀ , ಉಚಿತ ಪ್ರಯಾಣ, ಯಜಮಾನಿಗೆ 2,000 ರೂ ಕಾಂಗ್ರೆಸ್ ಗ್ಯಾರೆಂಟಿ ಜಾರಿಗೊಳಿಸಿದ ಸಿಎಂ.!
ಕಾಂಗ್ರೆಸ್ಉ ಚಿತ ಗ್ಯಾರೆಂಟಿ ಜಾರಿಗೊಳಿಸಿದ ಸಿಎಂ!

ಐದು ಉಚಿತ ಗ್ಯಾರೆಂಟಿ ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಕೊನೆಗೂ ಯೋಜನೆ ಜಾರಿಗೊಳಿಸಿದೆ.  ಆದರೆ ಕಾಂಗ್ರೆಸ್ 5 ಉಚಿತ ಗ್ಯಾರೆಂಟಿಯನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು, ಕೊನೆಗೂ ಉಚಿತ ಗ್ಯಾರೆಂಟಿ ಯೋಜನೆ ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ 5 ಉಚಿತ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. 

ನಾವು 5 ಘೋಷಣೆ ಮಾಡಿ ಚುನಾವಣೆ ಎದುರಿಸಿದ್ದೇವೆ. ಈ ಗ್ಯಾರೆಂಟಿ ಯೋಜನೆ ಕಾರ್ಡ್‌ಗೆ ಸಹಿ ಹಾಕಿ ಜನರಿಗೆ ಆಶ್ವಾಸನೆ ಕೊಟ್ಟಿದ್ದೆವು. ಇದರ ನಡುವೆ ವಿರೋಧ ಪಕ್ಷದವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಸಂಪುಟ ಸಭೆ ನಡೆಸಿದ 5 ಗ್ಯಾರೆಂಟಿ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೆವು. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಐದು ಗ್ಯಾರೆಂಟಿ ಜಾರಿಗಾಗಿ ಚರ್ಚೆ ನಡೆಸಿದ್ದೇವೆ. 5 ಗ್ಯಾರೆಂಟಿಯನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಬೇಕು ಅನ್ನೋ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಜಾತಿ, ಭಾಷೆ, ಧರ್ಮ ಮಿತಿಗಳಿಲ್ಲದೆ ಈ ಗ್ಯಾರೆಂಟಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದಿದ್ದಾರೆ.

ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗ್ಯಾರೆಂಟಿಯನ್ನು ಜಾರಿಗೆ ತರುತ್ತಿದ್ದೇವೆ. ಒಬ್ಬ ಕುಟುಂಬ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಬಳಿಸಿದ್ದಾರೆ. ಇದರ ಸರಾಸರಿ ತೆಗೆದು ಅದರ ಮೇಲೆ 10 ಪರ್ಸೆಂಟ್ ಹೆಚ್ಚಿಗೆ ಮಾಡಿ ಲೆಕ್ಕ ತೆಗೆದುಕೊಳ್ಳುತ್ತೇವೆ. ಒಬ್ಬ ಒಂದು ತಿಂಗಳು 190 ಯುನಿಟ್ ಖರ್ಚು ಮಾಡಿರಬಹುದು. ಇನ್ನೊಂದು ತಿಂಗಳು 180 ಯುನಿಟ್ ವಿದ್ಯುತ್ ಬಳಸಿರಬಹುದು. ಆದರೆ 12 ತಿಂಗಳಲ್ಲಿ ಆತನ ಸರಾಸರಿ ಯುನಿಟ್ ಬಳಕೆಯ ಮೇಲೆ ಸರ್ಕಾರ 10 ಪರ್ಸೆಂಟ್ ಹೆಚ್ಚು ಸೇರಿಸಲಾಗುತ್ತದೆ. ಈ ವೇಳೆ ಸರಾಸರಿ 200 ಯುನಿಟ್ ಒಳಗಿದ್ದರೆ ವಿದ್ಯುತ್ ಉಚಿತವಾಗಲಿದೆ. 

ಆಗಸ್ಟ್ 15 ರಿಂದ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಲಿದೆ. ಆಗಸ್ಟ್ 15 ರಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕಾಗಿ ಮನೆಯ ಯಜಮಾನಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆ ನೀಡಬೇಕು. ಇದಕ್ಕಾಗಿ ಮನೆಯ ಯಜಮಾನಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಹಣ ಜಮಾವಣೆಯಾಗಲಿದೆ. ಒಂದು ಕುಟುಂಬ ಹೇಳುವ ಯಜಮಾನಿಗೆ 2,000 ರೂಪಾಯಿ ಹಣ ಜಮಾವಣೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಕೆಲ ತಾಂತ್ರಿಕ ಸಮಸ್ಯೆಗಳಿರುವ ಕಾರಣ ಈ ಯೋಜನೆಗೆ ಅರ್ಜಿ ಆಹ್ವಾನಿಸಿ, ಮನೆಯ ಯಜಮಾನಿಯ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾವುದೇ ಕಂಡೀಷನ್ ಇಲ್ಲದೆ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲಾಗುವುದು. ವರ್ಷದ ಸರಾಸರಿ ಆಧಾರದಲ್ಲಿ ಯಾರು 200 ಯುನಿಟ್​ ಒಳಗಡೆ ವಿದ್ಯುತ್​ ಬಳಸುತ್ತಾರೆ ಅವರು ಬಿಲ್​ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು 5 ಗ್ಯಾರೆಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಮಾಡುತ್ತೇವೆ. ಗ್ಯಾರಂಟಿ ಜಾರಿ ವಿಚಾರದಲ್ಲಿ ಯಾವುದೇ ಧರ್ಮ, ಜಾತಿ, ಭಾಷೆ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಒಡತಿಗೆ 2 ಸಾವಿರ ರೂಪಾಯಿ ನೀಡುವ ಯೋಜನೆಗೆ ಫಲಾನುಭವಿಗಳು ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ ಬಳಿಕ ಆಗಸ್ಟ್ ನ ೧೫ರಂದು ಇದು ಜಾರಿಯಾಗುವುದು ಇದು ಬಿಪಿಎಲ್ ಮತ್ತು ಎಪಿಎಲ್ ಕಾರ್ಡು ದಾರರು ವರ್ಗದ ಜನರಿಗೂ ಇದು ಅನ್ವಯವಾಗಲಿದೆ. ಜೂನ್​ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯವಾಕಶ ನೀಡಲಾಗುವುದು ಎಂದು ಹೇಳಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!