ಮಂಗಳೂರು: 19 ವರ್ಷದ ವಿದ್ಯಾರ್ಥಿನಿ ನಾಪತ್ತೆ
ಹುಡುಗಿ ನಾಪತ್ತೆ

ಮಂಗಳೂರು: ನಗರದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೂಲತಃ ಮೂಡಿಗೆರೆಯ ಶರೀನ್ ಭಾನು (19) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ಈಕೆ ಕೆಫೆಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಕೂಡ ಮಾಡಿಕೊಂಡಿದ್ದು, ಜೂ.1ರಂದು ಮೂಡಿಗೆರೆಗೆ ಬರುವುದಾಗಿ ಸಹೋದರಿಯಲ್ಲಿ ತಿಳಿಸಿದ್ದರು ಎನ್ನಲಾಗಿದೆ.

ಎತ್ತರ 5 ಅಡಿ, ಬಿಳಿ ಮೈ ಬಣ್ಣ, ಸಾಧಾರಣ ಸಪೂರ ಶರೀರ ಹೊಂದಿರುತ್ತಾರೆ. ಕಪ್ಪು ಬಣ್ಣದ ಬುರ್ಖಾ ಧರಿಸಿದ್ದು ಬೆನ್ನಿಗೆ ಬ್ಯಾಗ್ ಹಾಕಿರುತ್ತಾರೆ. ಉರ್ದು, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಮಾತನಾಡುತ್ತಾರೆ.

ಇವರು ಪತ್ತೆಯಾದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ದೂ.ಸಂಖ್ಯೆ: 0824-2220518, ಪೊಲೀಸ್ ಕಂಟ್ರೋಲ್ ರೂಮ್ - 0824-2220800, ಪೊಲೀಸ್ ಇನ್ಸೆಪೆಕ್ಟರ್-9480805339, ಪೊಲೀಸ್ ಸಬ್ ಇನ್ಸೆಪೆಕ್ಟರ್-9480805346ಗೆ ಕರೆ ಮಾಡಿ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!