ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ಗ್ರಾಮಾಂತರ ಪ್ರಖಂಡ ಇವರ ವತಿಯಿಂದ "ದಿ ಕೇರಳ ಸ್ಟೋರಿ" ಉಚಿತ ಪದರ್ಶನ
ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ಗ್ರಾಮಾಂತರ ಪ್ರಖಂಡ ಇವರ ವತಿಯಿಂದ "ದಿ ಕೇರಳ ಸ್ಟೋರಿ" ಉಚಿತ ಪದರ್ಶನ

ಸುಧಿಪ್ತೋ ಸೇನ್ ನಿರ್ದೇಶಿಸಿದ ದಿ ಕೇರಳ ಸ್ಟೋರಿ ಭಾರತೀಯ ಚಲನಚಿತ್ರ ದೇಶದಲ್ಲೇ ದೊಡ್ಡ ಮಟ್ಟದ ವಿವಾದ ಎಬ್ಬಿಸಿ ಸಕ್ಸಸ್ ಕಂಡಿದೆ.

ಆಮೂಲಾಗ್ರ ಇಸ್ಲಾಮಿಕ್ ಧರ್ಮಗುರುಗಳು ಕೇರಳದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಆಪಾದಿತ ಧಾರ್ಮಿಕ ಬೋಧನೆ ಚಿತ್ರದ ಕಥಾವಸ್ತು. ಸಿನಿಮಾ ಕಂಡು ಮಹಿಳೆಯರ ಯುವತಿಯರ ಚಿಂತನೆಗಳೇ ಬದಲಾಗಿದೆ. ಸಿನಿಮಾದ ಸಂದೇಶ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದೆ‌.

ಇದು "ಕೋಮು ಸೂಕ್ಷ್ಮ" ಮತ್ತು "ಹಿಂಸಾಚಾರವನ್ನು ಪ್ರಚೋದಿಸುತ್ತದೆ" ಎಂದು ಪ್ರಾರಂಭದಿಂದ ಈಗಲೂ ವಿರೋಧಗಳು ಕೇಳಿ ಬರುತ್ತಿವೆ.

ಸಿನಿಮಾ‌ ರೀಲಿಸ್ ಬಳಿಕವೂ ದೇಶದಲ್ಲಿ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ ಹಿಂದೂ ಯುವತಿಯರು ಲವ್ ಜಿಹಾದ್ ಗೆ ಭೀಕರವಾಗಿ ಬಲಿಯಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ‌.

ಏನೇ ಆದರೂ ಲವ್ ಜಿಹಾದ್ ಮತಾಂತರದ ಬಗ್ಗೆ ಸಿನಿಮಾ ನೋಡಿದ ಬಳಿಕವಾದರೂ ಯುವತಿಯರು ಎಚ್ಚೆತ್ತಿರುವುದು ಉತ್ತಮ ಬೆಳವಣಿಗೆ.

ಈ ಕೇರಳ‌ದ ಕಥೆ ಕೇರಳದಲ್ಲೆ ಕೊನೆಯಾಗಲಿ ಇದು ಯಾವ ರಾಜ್ಯದಲ್ಲೂ ಬರಬಾರದು ಎನ್ನುವ ಉದ್ಧೇಶದಿಂದ ಹಿಂದೂ ಸಂಘಟನೆಗಳು ಯುವತಿಯರಿಗೆ, ಮಹಿಳೆಯರಿಗೆ ಉಚಿತ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಅದೇ ರೀತಿ ಇಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ಗ್ರಾಮಾಂತರ ಪ್ರಖಂಡ ಇವರ ವತಿಯಿಂದ ಸಿನೆಮಾದ ಉಚಿತ ಪದರ್ಶನ ಯಶಸ್ವಿಯಾಗಿ ನಡೆದಿದೆ.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಶ್ಯಾಮಲಾ ಎಸ್ ಕುಂದರ್, ಲಕ್ಷ್ಮೀನಾರಾಯಣ ರಾವ್, ಭಾಗ್ಯಶ್ರೀ ಐತಾಳ್, ನೀತಾ ಪ್ರಭು, ಪ್ರಕಾಶ್ ಪುತ್ರನ್, ಅಭಿಲಾಷ್ ಪೆರ್ಡೂರು, ಸುರೇಶ್ ಮೆಂಡನ್, ಪ್ರವೀಣ್ ಪರ್ಕಳ, ನಿತೇಶ್ ಪರ್ಕಳ ಮತ್ತು ಹಿಂದೂ ಸಂಘಟನೆಯ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!