ಉಡುಪಿ: ವ್ಯಕ್ತಿ ನಾಪತ್ತೆ - ಪತ್ತೆಗಾಗಿ ಪ್ರಕಟಣೆ
ವ್ಯಕ್ತಿ ನಾಪತ್ತೆ - ಪತ್ತೆಗಾಗಿ ಪ್ರಕಟಣೆ

ಉಡುಪಿ: ಉಡುಪಿ ತಾಲೂಕು ಕುತ್ಪಾಡಿ ಗ್ರಾಮದ ನಿವಾಸಿ ಪ್ರಕಾಶ್ ಸದಾಶಿವ ಶೆಟ್ಟಿ (31) ಎಂಬ ವ್ಯಕ್ತಿಯು ಜೂನ್ 3 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

5 ಅಡಿ 7 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇನ್ನು ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!