ಸ್ಲೀಪರ್ ಕೋಚ್ ಬಸ್‌ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು: ಪ್ರಾಣಬಿಟ್ಟ ಯುವತಿ
ವಿಷ ಕುಡಿದು ಬಸ್‌ನಲ್ಲಿ ಜೋಡಿ: ಬದುಕಿದ ಯುವಕ

ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರೇಮಿಗಳು ವಿಷ ಕುಡಿದು ಮಲಗಿದ ಘಟನೆಯೊಂದು ಬೆಳಕಿಗೆ ಬಂದಿದೆ. ಘಟನೆಯಿಂದ ಯುವತಿ ಬಸ್‌ನಲ್ಲೇ ಪ್ರಾಣ ಬಿಟ್ಟಿದ್ದಾಳೆ. ವಿಷಯ 5 ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು ಮೂಲದ 20 ವರ್ಷದ ಯುವತಿ ಹೇಮಾ ಫೈನಲ್ ಇಯರ್ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದು. ಅಖಿಲ್ ಎಂಬ ಬಾಗಲಕೋಟೆ ಮೂಲದ ಯುವಕನ ಜೊತೆ ಹೇಮಾಗೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ರು ಇಬ್ಬರ ಮನೆಯಲ್ಲೂ ಇವರ ಪ್ರೀತಿಗೆ ವಿರೋಧ ವ್ಯಕ್ತವಾಗಿದೆ.

ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ಪ್ರೇಮಿಗಳು ವಿಷ ಕುಡಿದಿದ್ದಾರೆ ಎನ್ನಲಾಗಿದೆ. ಪ್ರಜ್ಞೆ ಕಳೆದುಕೊಂಡಿದ್ದ ಅಖಿಲ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾನೆ. ಇನ್ನೊಂದೆಡೆ, ವಿಷ ಕುಡಿದ ಯುವತಿ ಹೇಮಾ ರಾಮಕೃಷ್ಣ ಮೃತಪಟ್ಟಿದ್ದಾಳೆ. 

ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಸ್ಲೀಪರ್‌ ಬಸ್‌ನಲ್ಲೇ ವಿಷ ಕುಡಿದು ಮಲಗಿದ್ದಾರೆ. ದುರಾದೃಷ್ಟವಶಾತ್ ಹೇಮಾ ಮೃತಪಟ್ಟಿದ್ದಾರೆ. ಸಾಯೋದಕ್ಕೂ ಮುಂಚೆ ನಮಗೆ ಮದುವೆಗೆ ನೀವು ಒಪ್ಪಿಗೆ ಕೊಡಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ಬಾಂಬೆಗೆ ಹೋಗ್ತಾ ಇದೆವೆ ಎಂದು ಫೋನ್ ಮಾಡಿ ಯುವತಿ ಹೇಳಿಕೊಂಡಿದ್ಳು ಎಂದೂ ತಿಳಿದುಬಂದಿದೆ. ಬಳಿಕ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್‌ನವರಿಗೆ ಅನುಮಾನ ಬಂದಿದೆ. ವಿಷದ ವಾಸನೆ ಬಂದ ಹಿನ್ನೆಲೆ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ಮಾಡಿದ್ದಾರೆ. ಆದರೆ ಹುಡುಗಿ ಬದುಕಲಿಲ್ಲ. ಹುಡುಗ ಹುಷಾರಾಗಿದ್ದಾನೆ ಎಂದು ವರದಿಯಾಗಿದೆ. ಇನ್ನು, ಈ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!