ಮಂಗಳೂರು: ಬಿಪೊರ್‌ಜಾಯ್ ಅಬ್ಬರ - ಗುಡುಗು ಸಹಿತ ಮಳೆ, ಮೀನುಗಾರರಿಗೆ ಎಚ್ಚರಿಕೆ
ಬಿಪರ್​ಜಾಯ್ ಚಂಡಮಾರುತ ಅಲರ್ಟ್

ಮಂಗಳೂರು: ಬಿಪರ್​ಜಾಯ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ತೀವ್ರ ಸ್ವರೂಪ ಪಡೆದಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ದ.ಕ. ಉಡುಪಿ, ಉತ್ತರ ಕನ್ನಡ ಸಹಿತ ಹಲವೆಡೆ ಗುಡುಗು ಸಹಿತಮಳೆಯಾಗುವ ಸಾಧ್ಯತೆ ಇದೆ.

ಬಿಪರ್​ಜಾಯ್ ಚಂಡಮಾರುತ ಈ ಮೊದಲು ಊಹಿಸಿದಕ್ಕಿಂತ ತೀವ್ರವಾಗಿದ್ದು, ಉತ್ತರದತ್ತ ಸಂಚರಿಸುತ್ತಿದ್ದು ಮತ್ತಷ್ಟು ಪ್ರಬಲವಾಗಿದೆ. ಗೋವಾ , ಗುಜರಾತ್ ನಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ.

ಚಂಡ ಮಾರುತದ ಪರಿಣಾಮ ರಾಜ್ಯದಲ್ಲೂ ಮುಂದಿನ 3-4 ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೂ.9 ರಿಂದ ಜೂ 12ರವರೆಗೆ ಮುಂದಿನ ನಾಲ್ಕು ದಿನಗಳು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ

ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ 2.5 - 3.3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!