ಮಂಗಳೂರು: ಶಂಸುಲ್ ಇಸ್ಲಾಂ ಕಾರ್ಯಕ್ರಮಕ್ಕೆ ತೀವ್ರ ವಿರೋಧ.!
ಸ್ವಾತಂತ್ರ್ಯ ಸಂಗ್ರಾಮ 1857 – ಕುರಿತು ಉಪನ್ಯಾಸ

ಎಬಿವಿಪಿ ಭಾರೀ ವಿರೋಧ- ಪೊಲೀಸರೊಂದಿಗೆ ಜಟಾಪಟಿ

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಬಿ ವಿ ಕಕ್ಕಿಲ್ಲಾಯ ಪ್ರತಿಷ್ಠಾನ ದಿಂದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 – ಜಂಟಿ ಬಲದಾನಗಳು, ಜಂಟಿ ವಾರಿಸುದಾರಿಕೆ ಕುರಿತು ಉಪನ್ಯಾಸ ಕಾರ್ಯಕ್ರಮ  ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮಕ್ಕೆ ಎಬಿವಿಪಿ ಭಾರೀ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ಉಪನ್ಯಾಸ ನೀಡಲಿರುವ ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಡಾ ಶಂಸುಲ್‌ ಇಸ್ಲಾಂ ಗೆ ಎಬಿವಿಪಿ‌‌ ಭಾರೀ ವಿರೋಧ ವ್ಯಕ್ತಪಡಿಸಿದೆ. ವಿರೋಧದ ನಡುವೆಯೂ ಬಿ ವಿ ಕಕ್ಕಿಲ್ಲಾಯ ಪ್ರತಿಷ್ಠಾನ ದಿಂದ ಕಾರ್ಯಕ್ರಮ ಆಯೋಜನೆ ಮಾಡಿದೆ.

ಆರ್ ಎಸ್ ಎಸ್, ಸಂಘ ಪರಿವಾರ ಹಾಗು ಪ್ರಧಾನಿ ಮೋದಿಯ ತೀವ್ರ ವಿರೋಧಿ ಆಗಿರುವ ಡಾ ಶಂಸುಲ್ ಇಸ್ಲಾಂ ರನ್ನು ಕೆರೆಸಿರರುವುದನ್ನು ಎಬಿವಿಪಿ ಖಂಡಿಸಿದೆ. ವಿವಾದಾತ್ಮಕ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಕಾಲೇಜಿನಲ್ಲಿ ಸಂಘರ್ಷ ವಾತಾವರಣ ಸೃಷ್ಠಿಗೆ ಸಂಚು ಮಾಡಲಾಗಿದೆ ಎಂದು ಎಬಿವಿಪಿ ಆರೋಪಿಸಿದೆ. 

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನ ದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಲೇಜು ಆವರಣದಲ್ಲಿ ಎ ಬಿ ವಿಪಿ‌ ಪ್ರತಿಭಟನೆ ನಡೆಸಿದೆ. ಗೋ ಬ್ಯಾಕ್ ಶಂಸುಲ್ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಕಾಲೇಜು ನುಗ್ಗಲು ಎ ಬಿ ವಿ ಪಿ ಕಾರ್ಯಕರ್ತರು ಯತ್ನಸಿದ್ದಾರೆ.

ಪ್ರತಿಭಟನೆ ತೀವ್ರಸ್ವರುಪ ಪಡೆಯುತ್ತಿದ್ದಂತೆ ಪ್ರತಿಭಟನಕಾರರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಜಟಾಪಟಿ ನಡೆದಿದೆ. ಮುತ್ತಿಗೆ ಹಾಕಲು ಮುಂದಾದ ಎ ಬಿ ವಿ ಪಿ ಕಾರ್ಯಕರ್ತರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!