"ಮಾಯೊದ ಮಹಾಶಕ್ತಿಲು" ನಾಟಕದ ಮುಹೂರ್ತ
ಕರಾವಳಿಯಲ್ಲಿ ಮತ್ತೊಂದು ಭಕ್ತಿ ಪ್ರಧಾನ ನಾಟಕ

ಉಡುಪಿ : ಎಂಕ್ಲನ್ನ ಕಲಾವಿದರೆ ಮಟ್ಟು ಕಟಪಾಡಿ ಈ ತಂಡದ ನೂತನ ಭಕ್ತಿ ಪ್ರಧಾನ ನಾಟಕದ ಮುಹೂರ್ತ ಉದ್ಯಾವರ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.

ಯಕ್ಷಗಾನ ಪ್ರಸಂಗಕರ್ತ ಸಾಹಿತಿ ನವೀನ್ ಪಡ್ರೆ ರಚಿಸಿದ ಅದ್ಧೂರಿ ಭಕ್ತಿ ಪ್ರಧಾನ ನಾಟಕ ಇದ್ದಾಗಿದ್ದು, ನಾಟಕ ರಂಗದಲ್ಲೇ ಹೊಸ ಇತಿಹಾಸ ಸೃಷ್ಠಿಸಲಿದೆ ಎಂಬುದಾಗಿ ಮುಹೂರ್ತದ ಧಾರ್ಮಿಕ ವಿಧಿ ವಿಧಾನ ಪೊರೈಸಿದ ಅರ್ಚಕರು ಹೇಳಿದ್ದಾರೆ. ಇದೇ ಸಂದರ್ಭ ಕಲ್ಕುಡ ಕುಲ್ಕಟ್ಟಿ ಸಾನಿಧ್ಯದಲ್ಲೂ ಪೂಜೆ ನಡೆಸಲಾಯಿತು.

ಈ ಸಂದರ್ಭ ನಾಟಕ ತಂಡದ ಸಂಚಾಲಕ ರಂಜಿತ್ ಮಟ್ಟು, ನಾಟಕಗಾರ ನವೀನ್ ಪಡ್ರೆ, ಕಲಾವಿಧರಾದ, ಸುರೇಶ್ ಎರ್ಮಾಳ್, ಹರೀಶ್ ಹೇರೂರು, ಜಯಶ್ರೀ ಉದ್ಯಾವರ, ಸ್ವಾತಿ ತೊಟ್ಟಂ, ಉಮೇಶ್ ಪಿತ್ರೋಡಿ, ವೀಕ್ಷೀತ್ ಆಚಾರ್ಯ, ಕಿರಣ್ ಆಚಾರ್ಯ, ಸುಮಲತ ಇನ್ನಂಜೆ ಮತ್ತಿತರರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!