ಕೊಲ್ಲೂರು: ಜಮೀನಿಗೆ ಬರುತ್ತೆ ಎಂದು 15 ದನಗಳಿಗೆ ಶೂಟ್ ಮಾಡಿದ ಪಾಪಿ.!
ದನಗಳಿಗೆ ಗುಂಡಿಕ್ಕಿ ಹತ್ಯೆ - ನಾಲ್ಕು ಸಾವು, ಹಲವು ಗಂಭೀರ

ಕುಂದಾಪುರ: ತನ್ನ ಜಾಗಕ್ಕೆ ಪ್ರವೇಶಿಸಿದ ಒಂದೇ ಕಾರಣಕ್ಕೆ 20ಕ್ಕೂ ಹೆಚ್ಚು ಜಾನುವಾರುಗಳಿಗೆ ಗುಂಡಿಕ್ಕಿದ ಪರಿಣಾಮ ನಾಲ್ಕು ದನಗಳು ಸತ್ತು 15 ದನಗಳು ಗಂಭೀರ ಗಾಯಗೊಂಡ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡು ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಸೆಪ್ಟಂಬರ್ 23ರಂದು ಸ್ಥಳೀಯ ನಿವಾಸಿ ಗುಲಾಬಿ ಎಂಬುವರಿಗೆ ಸೇರಿದ ದನವೊಂದನ್ನು ಮೇಯಲು ಬಿಟ್ಟಿದ್ದು ಅದು ನರಸಿಂಹ ಎಂಬಾತನ ಗದ್ದೆಗೆ ಹೋಗಿತ್ತೆನ್ನಲಾಗಿದೆ.

ಇನ್ನು ಇದರಿಂದ ಆಕ್ರೋಶಿತಗೊಂಡ ನರಸಿಂಹ ತನ್ನ ನಾಡಕೋವಿಯಿಂದ ಗುಂಡಿಕ್ಕಿ ದನವನ್ನು ಸಾಯಿಸಿದ್ದಾನೆ. ಗುಂಡೇಟಿಗೆ ದನವು ಗದ್ದೆಯಲ್ಲಿಯೇ ಸತ್ತು ಬಿದ್ದಿದೆ. ಇದನ್ನು ಗಮನಿಸಿ ವಿಚಾರಿಸಲು ಹೋದಾಗ ಆರೋಪಿ ನರಸಿಂಹ ಗುಲಾಬಿ ಹಾಗೂ ಅವರ ಮನೆಯವರಿಗೆ ಕೋವಿಯಲ್ಲಿ ಗುರಿಯಿಟ್ಟು, ಈಗಾಗಲೇ 20ಕ್ಕೂ ಹೆಚ್ಚು ದನಗಳಿಗೆ ಗುಂಡಿಕ್ಕಿದ್ದೇನೆ.

ಅದರಲ್ಲಿ ನಾಲ್ಕು ಸತ್ತಿವೆ. ಇನ್ನಳಿದವು ಸಾಯುತ್ತವೆ. ಜಾಗ್ರತೆ ಮಾಡದಿದ್ದಲ್ಲಿ ದನಗಳಿಗಾದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!