ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನ
ಕರಾವಳಿ ಉತ್ಸವ ಮೈದಾನದಲ್ಲಿ ಆಕರ್ಷಣೆಯ ಕೇಂದ್ರವಾದ ಮತ್ಸ್ಯಲೋಕ

ಮಂಗಳೂರು: ರಾಷ್ಟ್ರೀಯ ಗ್ರಾಹಕರ ಮೇಳ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಸೆಪ್ಟೆಂಬರ್ 29 ರಂದು ಇಂದು ಶುಭಾರಂಭಗೊಂಡಿದೆ.

ರಾಷ್ಟ್ರೀಯ ಗ್ರಾಹಕರ ಮೇಳವು ದಕ್ಷಿಣ ಭಾರತದಾದ್ಯಂತ ಕಳೆದ ನಾಲ್ಕು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ಎನ್‌ಸಿಎಫ್ ನಿಂದ ಸಂಘಟಿಸಲ್ಪಡುತ್ತಿದೆ.

ಈ ಅಂತರ್ಜಲ ಸುರಂಗವು ಹಲವು ಪ್ರಬೇದದ ಮೀನುಗಳೊಂದಿಗೆ ಸುಂದರ ಮತ್ಸ್ಯ ಲೋಕವನ್ನು ಸೃಷ್ಟಿಸಿ ಮಂಗಳೂರಿನ ಜನತೆಗೆ ರಸದೌತಣವನ್ನು ನೀಡಲು ಸಜ್ಜಾಗಿದ್ದು,ಅದಷ್ಟೇ ಅಲ್ಲದೆ ರೊಬೊಟಿಕ್ ಅನಿಮಲ್ ಶೋದಲ್ಲಿ ದೈತ್ಯಾಕಾರದ ವನ್ಯಮೃಗಗಳು ಹಾಗೂ ಅವುಗಳ ಘರ್ಜನೆ ದಟ್ಟಾರಣ್ಯದಲ್ಲಿ ವಿಹರಿಸಿದ ಅನುಭವವನ್ನು ನೀಡಲಿದೆ.

ಈ ಮೊದಲು ಮಂಗಳೂರಿಗೆ ಸ್ನೋವಲ್ಡ್, ಅಕ್ವಾ ಶೋ, ಬರ್ಡ್‌ಶೋ, ತಾಜ್‌ಮಹಲ್‌ನಂತಹ ವಿನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಾ ಬಂದಿದೆ. ಈ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿ ಶಾಪಿಂಗ್ ಮತ್ತು ಮನರಂಜನಾ ಮೇಳವಾಗಿರುತ್ತದೆ.

ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ, ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿವೆ.

ಮನೋರಂಜನಾ ವಿಭಾಗದಲ್ಲಿ ಟೋರಾ ಟೋರಾ, ಡ್ಯಾಶಿಂಗ್ ಕಾರ್, ಜಾಯಿಂಟ್ ವ್ಹೀಲ್, ಡ್ರ್ಯಾಗನ್ ಟ್ರೇನ್, ಮೆರ್ರಿ ಕೊಲಂಬಸ್, ೩ಡಿ ಶೋಸ್, ಸ್ಕೇರಿ ಹೌಸ್, ಏರ್ ಶಾಟ್, ಸ್ಪೇಸ್ ಜೆಟ್, ಇತ್ಯಾದಿ. ರಾಷ್ಟ್ರೀಯ ಗ್ರಾಹಕರ ಮೇಳ ಕರಾವಳಿ ಉತ್ಸವ ಮೈದಾನದಲ್ಲಿ ಸಂಜೆ 4ರಿಂದ 9 ಗಂಟೆವರೆಗೆ ನಡೆಯಲಿದೆ. ಉದ್ಘಾಟನಾ ಕರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ನೆರವೇರಿಸಿದ್ದು, ಮೇಯರ್ ಸುದೀರ್, ಎನ್‌ಸಿಎಫ್ ವತಿಯಿಂದ ಚೈತನ್ಯ ಹಾಗೂ ವಿಜಯ ಕುಮಾರ್ ಮತ್ತು ನಿಸರ್ಗ ಪಬ್ಲಿಸಿಟಿಯ ಮಂಜುನಾಥ್.ಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!