'ಕಾಂತಾರ' ಫಸ್ಟ್ ಲುಕ್‌ಗೆ ಮುಹೂರ್ತ ಫಿಕ್ಸ್ - 7 ಭಾಷೆಯಲ್ಲಿ ರಿಲೀಸ್.!
ಕಾಂತಾರ ಪ್ರೀಕ್ವೆಲ್ ಆರಂಭ.! ಫಸ್ಟ್ ಲುಕ್ ರಿಲೀಸ್​ಗೆ ಡೇಟ್ ಫಿಕ್ಸ್

ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟ ಸಿನಿಮಾ 'ಕಾಂತರ'. ಈ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಟನಾಗಿ, ನಿರ್ದೇಶಕನಾಗಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದರು. ಭಾರತದಾದ್ಯಂತ ಭಾಷೆಯ ಭೇದವಿಲ್ಲದೆ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಐದೂ ಭಾಷೆಗಳಲ್ಲೂ ಸಿನಿಮಾ ಕಲೆಕ್ಷನ್‌ನಲ್ಲಿ ದಾಖಲೆ ಬರೆದಿತ್ತು.

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ 'ಕಾಂತಾರ' ಸಿನಿಮಾ ಭಾರತದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಈ ಯಶಸ್ಸಿನಿಂದಲೇ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ಷೆಲ್ ಮಾಡುವುದಕ್ಕೆ ಮುಂದಾಗಿದ್ದರು. ಒಂದಿಷ್ಟು ದಿನ ಈ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಚಿಕ್ಕದೊಂದು ಸುಳಿವು ಕೂಡ ಕೊಟ್ಟಿರಲಿಲ್ಲ. ಆದ್ರೀಗ ಸಿನಿಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 'ಕಾಂತಾರ ಚಾಪ್ಟರ್ 1' ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ.

ನಮಗೆಲ್ಲ ಕೆಜಿಎಫ್ ಹೊಸ ಅನುಭವ ಕೊಟ್ಟಿದೆ. ಕೆಜಿಎಫ್-2 ಕೂಡ ಈ ಒಂದ ಕುತೂಹಲ ಉಳಿಸಿಕೊಂಡಿದೆ. ಸಾಮಾನ್ಯವಾಗಿ ಪಾರ್ಟ್‌-2 ಸಿನಿಮಾಗಳು ಗೆಲ್ಲೋದು ತುಂಬಾನೆ ಕಡಿಮೇನೆ ಅಂತಲೇ ಹೇಳಬಹುದು. ಆದರೆ ಕನ್ನಡದ ಬಿಗ್ ಬಜೆಟ್ ಕೆಜಿಎಫ್ ಆ ಎಲ್ಲ ಸತ್ಯವನ್ನ ಸುಳ್ಳು ಮಾಡಿದೆ. ಕಾಂತಾರ ಸಿನಿಮಾ ಕೂಡ ಈ ರೀತಿಯ ಒಂದು ಶಕ್ತಿಯ ಚಿತ್ರವೇ ಆಗಿದೆ. ಇದನ್ನ ಕಂಡ ಜನ ಈಗಲೂ ಅದೇ ಹ್ಯಾಂಗೋವರ್‌ನಲ್ಲಿಯೇ ಇದ್ದಾರೆ. ಕಾಂತಾರ ಪ್ರೀಕ್ವಲ್ ಬರುತ್ತದೆ ಅನ್ನುವ ವಿಷಯ ಕೇಳಿದ್ದೇ ತಡ, ಇನ್ನಿಲ್ಲದ ಕುತೂಹಲಗಳು ಗರಿಗೆದರಿವೆ ನೋಡಿ.

ಇದೇ ತಿಂಗಳೂ 27 ರಂದು ಚಿತ್ರದ ಮುಹೂರ್ತ ನೆರವೇರುತ್ತದೆ ಅನ್ನುವ ಸುದ್ದಿ ಮೊನ್ನೆಯಿಂದಲೇ ಹರಿದಾಡುತ್ತಿದೆ. ಸಿನಿಮಾದ ಮುಹೂರ್ತದ ವಿಷಯದಲ್ಲೂ ಇನ್ನೂ ಒಂದು ವಿಚಾರ ಈಗ ಕೇಳಿ ಬರುತ್ತಿದೆ. ಈ ಹಿಂದೆ ಕೆಜಿಎಫ್ ಸಿನಿಮಾ ಮತ್ತು ಕಾಂತಾರ ಸಿನಿಮಾಗಳಿಗೆ ಉಡುಪಿಯಲ್ಲಿಯೇ ಮುಹೂರ್ತ ಆಗಿತ್ತು. ಇಲ್ಲಿಯ ವಿಘ್ನೇಶ್ವರ್ ಟೆಂಪಲ್‌ನಲ್ಲಿಯೇ ಮೂಹರ್ತ ನೆರವೇರಿತ್ತು. ಅದೇ ರೀತಿ ಕಾಂತಾರ ಪ್ರೀಕ್ವೆಲ್ ಚಿತ್ರದ ಮುಹೂರ್ತ ಕೂಡ ಇಲ್ಲಿಯೇ ನಡೆಯಲಿದೆ ಅನ್ನುವ ಮಾಹಿತಿ ಇದೆ. 

ಕಾಂತಾರ ಪ್ರೀಕ್ವೆಲ್ ಚಿತ್ರದಲ್ಲಿ ಪಂಜುರ್ಲಿ ದೈವರ ಸಂಪೂರ್ಣ ಚಿತ್ರಣ ದೊರೆಯಲಿದೆ. ಪಂಜುರ್ಲಿ ದೈವ ಸಿಕ್ಕನಂತರದ ಕಥೆಯನ್ನ ಈಗಾಗಲೇ ರಿಷಬ್ ಶೆಟ್ರು ಕಾಂತಾರದಲ್ಲಿಯೇ ಹೇಳಿದ್ದಾರೆ. ಅದರ ಹೊರತಾಗಿ ಬೇರೆಯದನ್ನ ಹೇಳೋಕೆ ರಿಷಬ್ ಶೆಟ್ರು ತುಂಬಾ ಹಿಂದೆ ಹೋಗಿದ್ದಾರೆ. ಇತಿಹಾಸ ಪುಟದಲ್ಲಿ ಅಡಗಿದ ಕಥೆಯನ್ನ ಬೆಳ್ಳಿತೆರೆಗೆ ತರಲು ಸಜ್ಜಾಗಿದ್ದಾರೆ.ಕಾಂತಾರ ಪ್ರೀಕ್ವೆಲ್ ಸಿನಿಮಾವನ್ನ ಶ್ರೀಲಂಕಾ ಮತ್ತು ಉಡುಪಿಯ ಸುತ್ತ ಮತ್ತ ಚಿತ್ರೀಕರಣ ಮಾಡೋ ಪ್ಲಾನ್ ಇದೆ. ಚಿತ್ರೀಕರಣದ ವೇಳೆ ತೊಂದರೆ ಆಗಬಾರದು ಅನ್ನುವ ಹಿನ್ನೆಲೆಯಲ್ಲಿ ಈ ಒಂದು ಪ್ಲಾನ್ ಮಾಡಲಾಗಿದೆ. ಇನ್ನುಳಿದಂತೆ ಕಾಂತಾರ ಪ್ರೀಕ್ವೆಲ್ ಸದ್ಯ ಎಲ್ಲರ ಕೇಂದ್ರ ಬಿಂದು ಆಗಿದೆ ಅಂತಲೂ ಹೇಳಬಹುದು. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!