"ಲವ್ ಜಿಹಾದ್" ಬಗ್ಗೆ ಯುವತಿಯರಿಗೆ ಎಚ್ಚರಿಕೆ ಕೊಟ್ಟ ನಟಿ ಮಾಳವಿಕಾ
"ಮುಸ್ಲಿಂ ಧರ್ಮದಲ್ಲಿ ಬಹು ಪತ್ನಿತ್ವದ ಪದ್ಧತಿಯಿದೆ": ಸಂಸ್ಕೃತಿ, ಸಂಸ್ಕಾರ ನಾಶಪಪಡಿಸಿ ಸಮಾನತೆ ಸಾಧಿಸುವ ಉದ್ದೇಶ ಹಿಂದೂ ಧರ್ಮಕ್ಕೆ ಇಲ್ಲ.!!

ಪುತ್ತೂರಿನಲ್ಲಿ ಲವ್ ಜಿಹಾದ್ ವಿರುದ್ಧ ನಟಿ ಮಾಳವಿಕಾ ಅವಿನಾಶ್ ಆತಂಕ ವ್ಯಕ್ತಪಡಿಸಿದ್ದಾರೆ. ಅಸೆ ಆಮಿಷಗಳಿಗೆ ತಲೆಯೊಡ್ಡಿ ಧರ್ಮ ತೊರೆಯದಂತೆ ಹಿಂದು ಯುವತಿಯರಿಗೆ ಕರೆ ನೀಡಿದ್ದಾರೆ. ಲವ್ ಜಿಹಾದ್ ಮೂಲಕ ತನ್ನ ಧರ್ಮವನ್ನು ತೊರೆದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಯುವತಿಯರು ಮೊದಲು ತಾವು ಏನನ್ನು ಕಳೆದುಕೊಳ್ಳುತ್ತೆ ಎಂಬ ಬಗ್ಗೆ ಯೋಚಿಸಬೇಕು ಎಂದು ನಟಿ ರಾಜಕಾರಣಿ ಮಾಳವಿಕಾ ಅವಿನಾಶ್ ಯುವತಿಯರಿಗೆ ಕಿವಿ ಮಾತು ಹೇಳಿದ್ದಾರೆ.

ಪುತ್ತೂರಿನ ತೆಂಕಿಲದಲ್ಲಿ ಪುತ್ತೂರು ಜಿಲ್ಲಾ ಮಹಿಳಾ ಸಮ್ಮೇಳನ `ನಾರಿ ಶಕ್ತಿ ಸಂಗಮ'ದಲ್ಲಿ ಮಾಳವಿಕಾ ಮಾತನಾಡಿದ್ದಾರೆ. ವಿವಿಧ ಆಸೆ, ಆಮಿಷಗಳಿಗೆ ಒಳಗಾಗಿ ಲವ್ ಜಿಹಾದ್ ಮೂಲಕ ಯುವತಿಯರು ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೊಳಗಾಗದಿರಿ ಎಂದಿದ್ದಾರೆ.

ಲವ್ ಜಿಹಾದ್ ನಿಂದ ಧರ್ಮ ತೊರೆಯುವ ಯುವತಿಯರು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕು. ಹಿಂದೂ ಧರ್ಮದಲ್ಲಿ ಏಕ ಪತ್ನಿ ಸಂಸ್ಕಾರವಿದೆ. ಮಹಿಳೆಯರು ಪತಿಯೊಂದಿಗೆ ಸಮಾನ ಹಕ್ಕುಗಳಿಗೆ ಬಾಧ್ಯಸ್ಥಳಾಗಿರುತ್ತಾರೆ. ಆದರೆ ಮುಸ್ಲಿಂ ಧರ್ಮದಲ್ಲಿ ಬಹು ಪತ್ನಿತ್ವದ ಪದ್ಧತಿಯಿದೆ. ಅನ್ಯ ಧರ್ಮೀಯರನ್ನು ವಿವಾಹವಾಗುವ ಹಿಂದೂ ಯುವತಿ ತನ್ನ ಸಮಾನ ಹಕ್ಕುಗಳಿಂದ ವಂಚಿತಳಾಗುತ್ತಾರೆ. ಇದಲ್ಲದೆ ಬಹುಪತ್ನಿತ್ವದಡಿ ಒಬ್ಬಳಾಗಿ ಬದುಕು ಸಾಗಿಸುವ ಅನಿವಾರ್ಯತೆ ಒದಗಿ ಬರುತ್ತದೆ ಎಂದಿದ್ದಾರೆ.

'ನೀನು ಮತಾಂತರವಾಗಿ ಮುಸ್ಲಿಂ ಧರ್ಮಕ್ಕೆ ಬಂದರಷ್ಟೇ ಪ್ರೀತಿಸುತ್ತೇನೆ' ಎನ್ನುವುದಾದರೆ ಅದು ಯಾವ ರೀತಿಯ ಪ್ರೀತಿ, ಪ್ರೇಮ ಎಂಬುದನ್ನು ಪ್ರತಿಯೊಬ್ಬ ಯುವತಿ ಅರ್ಥೈಸಿಕೊಳ್ಳಬೇಕಾಗಿದೆ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಮಹಿಳೆಯರು ಪ್ರಜ್ಞಾವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಟಿ ತಮ್ಮ ಮಾತುಗಳ ಮೂಲಕ ಕರೆ ನೀಡಿದರು. ಭಾರತೀಯ ಚಿಂತನೆಯಲ್ಲಿ ವೇದ ಕಾಲದಿಂದಲೂ ಪುರುಷ– ಮಹಿಳೆ ಎಂಬ ಬೇದ ಇರಲಿಲ್ಲ. ಹಿಂದೂ ಧರ್ಮವನ್ನು ಅನ್ಯರು ಸುಧಾರಣೆ ಮಾಡಲು ಹೋಗಲಿಲ್ಲ. ಬದಲಾಗಿ ಧರ್ಮದೊಳಗಿನ ಮಂದಿ ಸಮಾಜದ ಸುಧಾರಣೆ ಮಾಡಿದ್ದಾರೆ. ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ನಾಶಪಪಡಿಸಿ ಸಮಾನತೆಯನ್ನು ಸಾಧಿಸುವ ಉದ್ದೇಶ ಹಿಂದೂ ಧರ್ಮಕ್ಕೆ ಇಲ್ಲ’ ಎಂದು ಅವರು ಹೇಳಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!