ರಾಕಿಂಗ್ ಸ್ಟಾರ್ 'TOXIC' ಲುಕ್ - ಮುಂದಿನ ಸಿನೆಮಾ ಅನೌನ್ಸ್.??
ಯಶ್ ಹೊಸ ಸಿನಿಮಾ "ಟಾಕ್ಸಿಕ್" ಸೂಪರ್ ಟೈಟಲ್, ಭರ್ಜರಿ ನಿರೀಕ್ಷೆ

ಬಹು ನಿರೀಕ್ಷಿತ ಯಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಜಗತ್ತಿನ ಗಮನ ಸೆಳೆಯುವಂತಹ ಟೈಟಲ್ ಅನ್ನು ಅವರು ತಮ್ಮ ಚಿತ್ರಕ್ಕಾಗಿ ಇಟ್ಟಿದ್ದಾರೆ. ಟಾಕ್ಸಿಕ್ ಹೆಸರಿನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈ ಚಿತ್ರದ ಮೂಲಕ ಯಶ್ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್  ಜೊತೆ ಮಾನ್ ಸ್ಟರ್ ಮೈಂಡ್ ಕ್ರಿಯೇಸನ್ಸ್‍ ಹೆಸರು ಕೂಡ ಇದ್ದು, ಈ ಸಂಸ್ಥೆಯು ಯಶ್ ಅವರದ್ದು ಎಂದು ಹೇಳಲಾಗುತ್ತಿದೆ.

2019 ರಲ್ಲಿ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಯಶ್  ನೋಂದಣಿ ಮಾಡಿದ್ದಾರೆ. ಇದೀಗ ತಮ್ಮ 19ನೇ ಸಿನಿಮಾ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನ ನಿರ್ಮಾಣ ಮಾಡಲು ಯಶ್ ನಿರ್ಧಾರ ಮಾಡಿದ್ದಾರೆ.

ಯಶ್ ಲುಕ್ "ಮಾಸ್ ಮಾಸ್ & ಕ್ಲಾಸ್" 

ಯಶ್ ಅವರ ಲುಕ್ ಎಂದಿನಂತೆ ಶಾರ್ಪ್ ಸ್ಟೈಲ್​ನಲ್ಲಿ ಕಂಡುಬಂದಿದೆ. ಆದರೆ ಅವರ ಕಂಪ್ಲೀಟ್ ಲುಕ್ ಜಸ್ಟ್ ಮಾಸ್ ಆಗಿರದೆ ಅದರೊಂದಿಗೆ ಒಂದು ಕ್ಲಾಸೀ ಟಚ್ ಕೂಡಾ ಸೇರಿಕೊಂಡಿರುವುದು ಹೈಲೈಟ್. ಯಶ್ ಅವರ ಕ್ಲೋಸಪ್ ಲುಕ್ ಒಂದರಲ್ಲಿ ಅವರ ಕಣ್ಣುಗಳಲ್ಲಿ ತೀಕ್ಷ್ಣತೆ ಕಾಣಬಹುದು. ನಟನ ಲುಕ್ ನೋಡಿದರೆ ಸಿನಿಮಾ ವಿಶೇಷವಾದ ಹೊಸ ಕಾನ್ಸೆಪ್ಟ್ ಒಂದನ್ನು ತರಲಿದೆ ಎನಿಸುವಂತಿದೆ. ಇನ್ನೊಂದರಲ್ಲಿ ಯಶ್ ಸಿಗರೇಟ್ ಸೇದುವುದನ್ನು ಕಾಣಬಹುದು. ಇದರಲ್ಲಿ ನಟ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ವೆಪನ್ ಕೂಡಾ ಇದೆ.

ಈ ನಡುವೆ ಮತ್ತೊಂದು ಹೊಸ ವಿಷಯ ಹರಿದಾಡುತ್ತಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಕೇವಲ ಒಬ್ಬರು ನಾಯಕಿಯರಲ್ಲ, ಮೂವರು ನಾಯಕಿಯರ ಇರಲಿದ್ದಾರೆ ಎನ್ನುವುದು ಲೆಟೆಸ್ಟ್ ಮಾಹಿತಿ. ಸಾಯಿ ಪಲ್ಲವಿ, ಮೃಣಲಾ ಠಾಕೂರ್ ಹೀಗೆ ಮೂವರು ಹಿರೋಯಿನ್ ಚಿತ್ರದಲ್ಲಿ ಪಾತ್ರವಾಗಲಿದ್ದಾರಂತೆ.

ತಮ್ಮ ಹೊಸ ಸಿನಿಮಾದ ಟೈಟಲ್ ಅನ್ನು ಡಿ.8ರಂದು ಬೆಳಗ್ಗೆ 9.55ಕ್ಕೆ ಲಾಂಚ್ ಮಾಡುವುದಾಗಿ ರಾಕಿಭಾಯ್ ಘೋಷಣೆ ಮಾಡಿದ್ದಾಗ, 9.55ಕ್ಕೆ ಸಮಯ ನಿಗದಿ ಆಗಿದ್ದು ಏಕೆ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಲಾಂಚ್ ಮಾಡಿದರೆ ಒಳ್ಳೆಯದಾ? ಅಥವಾ ಯಾರಾದರೂ ಅದೇ ಸಮಯವನ್ನು ನಿಗದಿ ಮಾಡಿದ್ದಾರಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.

ಉತ್ತರ ಸಿಂಪಲ್ ಎನ್ನುತ್ತವೆ ಮೂಲಗಳು. ಯಶ್ ಅವರ 19ನೇ ಸಿನಿಮಾ ಇದಾಗಿದ್ದು, 9+5+5 ಒಟ್ಟು ಮಾಡಿದರೆ 19 ಸಂಖ್ಯೆಯಾಗುತ್ತದೆ. ಹಾಗಾಗಿ ಈ ಸಮಯವನ್ನು ನಿಗದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಶ್ ಏನೇ ಮಾಡಿದರೂ ಹೊಸ ರೀತಿಯಲ್ಲಿ ಯೋಚಿಸುತ್ತಾರೆ. ಹಾಗಾಗಿ ಈ ಲೆಕ್ಕಾಚಾರವನ್ನು ಅವರು ಹೊಸದಾಗಿ ಯೋಚಿಸಿದ್ದಾರೆ. ಅದರಾಚೆ ಏನೂ ಇಲ್ಲ ಎನ್ನುತ್ತಾರೆ ಯಶ್ ಆಪ್ತರು.  ಕೆಜಿಎಫ್, ಕೆಜಿಎಫ್ 2 ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಇಷ್ಟು ತಿಂಗಳು ಅವರು ತೆಗೆದುಕೊಂಡಿದ್ದು ಯಾಕೆ ಎನ್ನುವುದಕ್ಕೆ ಟೈಟಲ್ ನಲ್ಲೇ ಹಲವು ಉತ್ತರಗಳಿವೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!