ಮಂಗಳೂರು: ಮಾಸ್ಟರ್ ಚೆಫ್ ಇಂಡಿಯಾದಲ್ಲಿ ದಾಖಲೆ ಬರೆದ ಯುವಕ.! ಕುಡ್ಲದ ಕುವರನ ಐತಿಹಾಸಿಕ ಸಾಧನೆ
ಮಂಗಳೂರು: ಮಾಸ್ಟರ್ ಚೆಫ್ ಇಂಡಿಯಾದಲ್ಲಿ ದಾಖಲೆ ಬರೆದ ಯುವಕ.! ಕುಡ್ಲದ ಕುವರನ ಐತಿಹಾಸಿಕ ಸಾಧನೆ

ಮಂಗಳೂರು: ಸೋನಿ ಟಿವಿ ರಿಯಾಲಿಟಿ ಶೋ ಮಾಸ್ಟರ್ ಚೆಫ್ ಇಂಡಿಯಾ ಟ್ಯಾಲೆಂಟ್ ನಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಆಶಿಕ್ ಎಂಬ 24ರ ಹರೆಯದ ಯುವಕ ವಿನ್ನರ್ ಆಗಿ ಮೂಡಿಬಂದಿದ್ದಾರೆ. ನಿಗದಿತ ಸಮಯದಲ್ಲಿ ಮಾಡಿ ತೋರಿಸಬೇಕಿದ್ದ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಯುವಕನೊಬ್ಬ ವಿನ್ನರ್ ಆಗಿದ್ದಾನೆ. ಆ ಮೂಲಕ ಮಂಗಳೂರಿನ ಯುವಕ ಅಪರೂಪದ ಮೈಲುಗಲ್ಲು ಎನ್ನಬಹುದಾದ ಸಾಧನೆಯನ್ನು ಮಾಡಿದ್ದು ದೇಶದ ಗಮನ ಸೆಳೆದಿದೆ.

ಅಕ್ಟೋಬರ್ 16ರಿಂದ ನಡೆದು ಬಂದಿದ್ದ ರಿಯಾಲಿಟಿ ಶೋದಲ್ಲಿ ದೇಶಾದ್ಯಂತ ಚಾಲ್ತಿಯಲ್ಲಿರುವ ವಿಭಿನ್ನ ರೀತಿಯ ದೇಸಿ ಅಡುಗೆ ಮಾದರಿಗಳನ್ನು ತೋರಿಸುವುದು ಸವಾಲಾಗಿತ್ತು. 

ನಗರದ ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್-ಸಾರಮ್ಮ ದಂಪತಿಯ ಏಕೈಕ ಪುತ್ರನಾಗಿರುವ ಮುಹಮ್ಮದ್ ಆಶಿಕ್ ಗೆ ನಾನ ವಿಧದದ ಅಡುಗೆ ತಯಾರಿಯಲ್ಲಿ ಸಣ್ಣ ವಯಸ್ಸಿನಲ್ಲೇ ಆಸಕ್ತಿಯಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕಲಿಯಬೇಕೆಂಬ ಬಯಕೆಯಿತ್ತು. ಆದರೆ ಮನೆಯ ಆರ್ಥಿಕ ಸ್ಥಿತಿಗತಿ ಅದಕ್ಕೆ ಅವಕಾಶ ನೀಡಲಿಲ್ಲ.

ಆರ್ಥಿಕ ಸಮಸ್ಯೆ ಪರಿಹರಿಸಿಕೊಂಡು ಸಾಧಿಸುವ ಛಲ ಆಶಿಕ್ ಅವರಲ್ಲಿತ್ತು. ಹಾಗಾಗಿ ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ತನ್ನ ಮನೆಯಲ್ಲೇ ಶುಚಿ-ರುಚಿಯಾದ ಹೊಸ ಶೈಲಿಯ, ವಿಶಿಷ್ಟ ಸ್ವಾದದ ಆಹಾರಗಳನ್ನು ತಯಾರಿಸಿ ಕೊಡಲಾರಂಭಿಸಿದರು. ಅದರ ಜೊತೆಗೆ ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳ ಸಂದರ್ಭ ಸ್ಟಾಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ಆಹಾರವಲ್ಲದೆ ಕುಲ್ಕಿ ಶರ್ಬತ್ ಸಹಿತ ನಾನಾ ಬಗೆಯ ಪಾನೀಯಗಳನ್ನು ಕೂಡ ಮಾರಾಟ ಮಾಡತೊಡಗಿದರು.

ಮೊಹಮ್ಮದ್ ಆಶಿಕ್ ಪ್ರತಿಭಾನ್ವಿತ ಯುವಕನಾಗಿದ್ದರೂ, ಆರಂಭದಲ್ಲಿ ಹೊಟೇಲ್ ಮ್ಯಾನೇಜೆಂಟಿನಲ್ಲಿ ಗುರುತರ ಸಾಧನೆ ಮಾಡಲು ಹಣಕಾಸು ತೊಂದರೆ ಎದುರಾಗಿತ್ತು. ಇದನ್ನು ಮೆಟ್ಟಿ ನಿಲ್ಲಲು ತನ್ನದೇ ಆದ ವಿಶೇಷ ರೆಸಿಪಿಯುಳ್ಳ ಕುಲ್ಕಿ ಹಬ್ ಎನ್ನುವ ಜ್ಯೂಸ್ ಶಾಪ್ ಒಂದನ್ನು ಮಂಗಳೂರಿನಲ್ಲಿ ಆರಂಭಿಸಿದ್ದರು.

ಸೋನಿ ಟಿವಿಯಲ್ಲಿ ಈ ಹಿಂದೆ ನಡೆದಿದ್ದ ರಿಯಾಲಿಟಿ ಶೋದಲ್ಲಿ ಮೊಹಮ್ಮದ್ ಆಶಿಕ್ ಗಮನಸೆಳೆಯಲು ಪ್ರಯತ್ನ ಮಾಡಿದ್ದರೂ, ಅದು ಸಾಧ್ಯವಾಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಗುರುತರ ಸಾಧನೆ ಮಾಡಿದ್ದಲ್ಲದೆ, ಮಾಸ್ಟರ್ ಚೆಫ್ ಕಿರೀಟವನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಮೊಹಮ್ಮದ್ ಆಶಿಕ್ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

ಈ ಹಿಂದಿನ ತಪ್ಪುಗಳನ್ನು ನಿವಾರಿಸಿಕೊಂಡು ಸಾಧನೆ ತೋರಲು ಬಂದಿದ್ದೇನೆ. ನಿಶ್ಚಿತ ಗುರಿ ಇಟ್ಟುಕೊಂಡೇ ಬಂದಿದ್ದು, ಈ ಬಾರಿ ಗೆದ್ದು ತೋರಿಸುತ್ತೇನೆ. ಬರೀಯ ಗೆಲ್ಲಲು ಬಂದಿರುವುದಲ್ಲ. ಈ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವ ಸಾವಿರಾರು ಮಂದಿಯ ಕನಸು ಈಡೇರಿಸಲು ಬಂದಿದ್ದೇನೆ ಎಂದು ಈ ಹಿಂದೆ ಔಟ್ ಲುಕ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಮೊಹಮ್ಮದ್ ಆಶಿಕ್ ಅಭಿಪ್ರಾಯ ಪಟ್ಟಿದ್ದರು. ಮಾಸ್ಟರ್ ಚೆಫ್ ಇಂಡಿಯಾ ಸೀಸನ್ - 8 ಸೋನಿ ಲೈವ್ ನಲ್ಲಿ ಪ್ರಸಾರವಾಗಿದ್ದು, ಸೆಲೆಬ್ರಿಟಿ ಚೆಫ್ ಗಳಾದ ವಿಕಾಸ್ ಖನ್ನ, ರಣವೀರ್ ಬ್ರಾರ್, ಪೂಜಾ ಧಿಂಗ್ರಾ ತೀರ್ಪುಗಾರರಾಗಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!