ಮಂಗಳೂರು: ರಾಷ್ಟ್ರ ಮಟ್ಟದ ನೆಟ್‌ಬಾಲ್ ಚಾಂಪಿಯನ್ ಶಿಪ್ ಆಡಲಿರುವ ವಾಮಂಜೂರಿನ ಪವನ್ ಪೂಜಾರಿ
ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್ ಶಿಪ್ ಕರ್ನಾಟಕ ತಂಡಕ್ಕೆ
ವಾಮಂಜೂರಿನ ವಿದ್ಯಾರ್ಥಿ ಪವನ್ ಪೂಜಾರಿ ಆಯ್ಕೆ

ಮಂಗಳೂರು: ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಆಡಲು ಕರ್ನಾಟಕ ತಂಡಕ್ಕೆ ವಾಮಂಜೂರಿನ ವಿದ್ಯಾರ್ಥಿ ಪವನ್ ಪೂಜಾರಿ ಆಯ್ಕೆಯಾಗಿದ್ದಾರೆ.

ಪವನ್ ಇವರು ವಾಮಂಜೂರು ನಿವಾಸಿ ನಾಗೇಶ್ ಪೂಜಾರಿ ಹಾಗೂ ಲೋಲಾಕ್ಷಿ ದಂಪತಿಗಳ ಪುತ್ರನಾಗಿದ್ದು, ಯೆನಪೋಯ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ.

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ನೆಟ್‌ಬಾಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಜಾರ್ಖಂಡ್ ನಡೆಯಲಿರುವ 29ನೇ ನೆಟ್‌ಬಾಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಪಂದ್ಯವು ಜಾರ್ಖಂಡ್ ನಲ್ಲಿ ಡಿಸೆಂಬರ್ 21ರಿಂದ 24ರ ವರೆಗೆ ನಡೆಯಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!