ಕುಡಿಯುವ ನೀರಿನ ಯೋಜನೆಯಲ್ಲಿ ಬಹುಕೋಟಿ ಹಗರಣ - ದೊಡ್ಡ ಮಟ್ಟದ ಅಕ್ರಮ ಬಯಲು.!!
WILDLIFE, PWD, ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ.!
ದೊಡ್ಡ ಮಟ್ಟದ ಅಕ್ರಮ ಬಯಲು
ಭ್ರಷ್ಟ ಅಧಿಕಾರಿಗಳ ಅಮಾನತಿಗೆ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಕಾಂಕ್ಷಿಯ ಯೋಜನೆ ಮಲ್ಟಿ ವಿಲೇಜ್ ವಾಟರ್ ಸಪ್ಲೈ ಕಾಮಗಾರಿಗಾಗಿ ಯಾವುದೇ ಅನುಮತಿಗಳಿಲ್ಲದೆ ಪಿಡಬ್ಲ್ಯೂಡಿ, ಫಾರೆಸ್ಟ್,ವೈಲ್ಡ್ ಲೈಫ್ ಸ್ಥಳಗಳಲ್ಲಿ ರಸ್ತೆ ಅಗೆದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಬಹುಕೋಟಿ ವಂಚನೆ ಎನ್ನುವ ವಿಚಾರ ಬಯಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ, ಕುಂದಾಪುರ ವಿಧಾನಸಭಾ ಕ್ಷೇತ್ರ, ಕಾಪು ವಿಧಾನಸಭಾ ಕ್ಷೇತ್ರ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ "ಶಂಕರ್ ನಾರಾಯಣ ಕನ್ಸ್ಟ್ರಕ್ಷನ್" ಎಂಬ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದ್ದು ಟೆಂಡರ್ ನಲ್ಲಿ ಸೂಚಿಸಿದ ನಿಬಂಧನೆಗಳನ್ನು ಪಾಲಿಸದೆ ಕಾಮಗಾರಿ ಮುಂದುವರಿಸಿಕೊಂಡು ಹೋಗುತ್ತಿದ್ದು ಟೆಂಡರ್ ನಲ್ಲಿರುವಂತೆ 1,600 ಕಿಲೋಮೀಟರ್ಗಳಷ್ಟು ಪೈಪ್ ಲೈನ್ ಗಳನ್ನು ಮಾರ್ಪಡಿಸಿ 1200 ಕಿಲೋಮೀಟರ್ ಪರಿವರ್ತಿಸಿ ಪಿಡಬ್ಲ್ಯೂಡಿ ರಸ್ತೆ ಗಳಲ್ಲಿ ಕಾಮಗಾರಿ ನಡೆಸಿದ್ದು, ಈ ಅಕ್ರಮಗಳಿಗೆ ಪಿಡಬ್ಲ್ಯೂಡಿ ಇಂಜಿನಿಯರ್ ಗಳು ಸಾಥ್ ನೀಡಿದ್ದಾರೆ, ವೈಲ್ ಲೈಫ್ ಪ್ರದೇಶದಲ್ಲಿ ಯಾವುದೇ ಅನುಮತಿ ಇಲ್ಲದೆ ಕಾಮಗಾರಿ ನಡೆಸಲು ಅರಣ್ಯ ಅಧಿಕಾರಿಗಳು ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು,  ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ .

ಎಲ್ಲದಕ್ಕೂ ಪೂರಕವಾಗಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ಮುಖ್ಯ ಇಂಜಿನಿಯರ್ ಉದಯಕುಮಾರ್ ಶೆಟ್ಟಿ ಯವರು ಕಾಮಗಾರಿಯನ್ನು ಸರಿಯಾಗಿ ಪರಿಶೀಲನೆ ಮಾಡದೆ ಗುತ್ತಿಗೆದಾರರ ಆಮಿಷ ಕ್ಕೆ ಬಲಿಯಾಗಿ ಕಳಪೆ ಕಾಮಗಾರಿ ನಡೆಸಲು ಮತ್ತು ಬಿಲ್ ಮಾಡಿಕೊಟ್ಟಿರುವ ಅಧಿಕಾರಿಗಳನ್ನು ಕೊಡಲೇ ಅಮಾನತು ಗೊಳಿಸಲು ಭ್ರಷ್ಟಾಚಾರ ನಿರ್ಮೂಲನ ಹೋರಾಟ ಸಮಿತಿ ಅಗ್ರಹಿಸಿದೆ.

ಸಾಮಾನ್ಯ ಜನರು ಕಳೆದ 4, 5 ದಶಕಗಳಿಂದ ಅಭಯಾರಣ್ಯಗಳ ರಸ್ತೆ ಮೂಲಕ ಜನರು ನಗರ ಭಾಗದ ಶಾಲಾ ಕಾಲೇಜು ಹಾಗು ಉದ್ಯೋಗಕ್ಕೆ ತೆರಳುತ್ತಿದ್ದು ಈ ರಸ್ತೆಗಳಿಗೆ ಡಾಮರೀಕರಣ ಗೊಳಿಸಲು ತಡೆ ನೀಡುವ ಅರಣ್ಯ ಇಲಾಖೆ ಕುಡಿಯುವ ನೀರಿನ ಯೋಜನೆಯ ನೆಪದಲ್ಲಿ ಲಿಖಿತವಾಗಿ ಯಾವುದೇ ಪರವಾನಿಗೆ ನೀಡದೆ ಕಾಮಗಾರಿ ನಡೆಸಲು ಅವಕಾಶ ನೀಡಿದ್ದು ಎಷ್ಟು ಮಾತ್ರ ಸರಿ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕಳಪೆ ಕಾಮಗಾರಿ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಕಾಮಗಾರಿಯನ್ನು ನಡೆಸುತ್ತಿರುವ ಬಗ್ಗೆ ಗುತ್ತಿಗೆದಾರ ಕಡೆಯ ಜನರನ್ನು ಮಾತನಾಡಿಸಿದರೆ ನಾವು ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಬೇಕಾದಷ್ಟು ಹಣವನ್ನು ಕೊಟ್ಟು ಕೆಲಸ ಮಾಡುತ್ತಿದ್ದೇವೆ ನಮ್ಮ ಕಾಮಗಾರಿ ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ ನಮಗೆ ವಿಶೇಷ ಅನುಮತಿ ಇದೆ. ಪ್ರಶ್ನೆ ಮಾಡಿದವರಿಗೆ ಬೆದರಿಕೆ ಹಾಕುವಂತ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ ಎನ್ನುವ ಆರೋಪ ಸಂಸ್ಥೆ ಮೇಲೆ ಇದೆ. ಮುಂದಿನ ದಿನಗಳಲ್ಲಿ ಹೋರಾಟ ಸಮಿತಿ ಮುಖಾಂತರ ಸಮಾನಮನಸ್ಕ ಸಂಘಟನೆಗಳೊಂದಿಗೆ ಕೈ ಜೋಡಿಸಿ ಬೃಹತ್ ಪ್ರತಿಭಟನೆಯ ಹೋರಾಟಕ್ಕೆ ಕಾರ್ಯರೂಪವನ್ನು ಸಿದ್ಧಪಡಿಸಿದ್ದು ಈಗಾಗಲೇ ಕಾನೂನು ಹೋರಾಟಕ್ಕೆ ತಯಾರಿ ನಡೆಸಿದ್ದು ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು.

ಟೆಂಡರ್ ನಿಯಮಗಳನ್ನು ಮೀರಿ ಕಾಮಗಾರಿ ನಡೆಸಿದ ಸಂಸ್ಥೆಯ ವಿರುದ್ಧ ಕೇಸು ದಾಖಲಿಸಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆನ್ನು ಬೇಡಿಕೆಯನ್ನಿಟ್ಟು ಹೋರಾಟ ನಡೆಸಲಿದ್ದೇವೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!