ಸಲಾರ್​ ಸಕ್ಸಸ್.. ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಡಾರ್ಲಿಂಗ್ ಪ್ರಭಾಸ್
ಸಲಾರ್​ ಸಕ್ಸಸ್.. ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಡಾರ್ಲಿಂಗ್ ಪ್ರಭಾಸ್

ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್​ನಲ್ಲಿ ಸಲಾರ್ ಮೂವಿ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಬ್ಲಾಕ್​ ಬಸ್ಟರ್​ ಹಿಟ್ ಆಗಿದೆ. ಸಲಾರ್ ಸೀಸ್​​ಫೈರ್​- 1ಗೆ ದೇಶಾದ್ಯಂತ ಉತ್ತಮ ರೆಸ್ಪಾನ್ಸ್​ ಸಿಕ್ಕು ಇನ್ನು ಥಿಯೇಟರ್​ನಲ್ಲಿ ಪ್ರದರ್ಶನವಾಗುತ್ತಿದೆ. ಇಂತಹ ಬಿಗ್‌ ಸಕ್ಸಸ್​ ಕಂಡ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ಸಲಾರ್​ ಸಿನಿಮಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಡಾರ್ಲಿಂಗ್​ ಪ್ರಭಾಸ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಬಳಿಕ ವಿಶೇಷ ಪೂಜೆ ಸಲ್ಲಿಸಿ ದುರ್ಗೆಯ ದರ್ಶನ ಪಡೆದರು. ಇದೇ ವೇಳೆ ಕಟೀಲು ಕ್ಷೇತ್ರದ ವತಿಯಿಂದ ನಟ ಪ್ರಭಾಸ್‌ ಅವರಿಗೆ ದುರ್ಗೆಯ ಫೋಟೋ ನೀಡಿ ಗೌರವಿಸಲಾಯಿತು.

ರಿಲೀಸ್ ಆಗಿದ್ದ ಸಲಾರ್ ಮೂವಿ ಫುಲ್ ಪೈಸಾ ವಸೂಲ್ ಮಾಡಿದೆ. 2ನೇ ಭಾಗ ಮುಂದಿನ ದಿನಗಳಲ್ಲಿ ಬರಲಿದೆ. ಇದಕ್ಕಾಗಿ ಫ್ಯಾನ್ಸ್​ ಕಾತುರದಿಂದ ಕಾಯುತ್ತಿದ್ದಾರೆ. ಇದು ರಿಲೀಸ್ ಆಗಲು 2 ವರ್ಷದ ಮೇಲೆ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!