ಮಂಗಳೂರು: ಮನೆಗೆ ನುಗ್ಗಿದ ಕಳ್ಳರು - 70ಸಾವಿರ ನಗದು ಸಹಿತ ಸೊತ್ತುಗಳ ಕಳವು.!
ಬಾಡಿಗೆ ಮನೆಯಿಂದ ನಗದು- ಬೆಳ್ಳಿ ಸೊತ್ತು ಕಳವು

ಮಂಗಳೂರು : ಮಂಗಳೂರು ನಗರದ ಕದ್ರಿ ಜಾರ್ಜ್ ಮಾರ್ಟಿಸ್ ರೋಡ್ ಸಮೀಪದ ಬಾಡಿಗೆ ಮನೆಯಿಂದ ನಗದು ಹಣ ಮತ್ತು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಲಾದ ಘಟನೆ ನಡೆದಿದೆ.

ಬಾಡಿಗೆ ಮನೆಯಲ್ಲಿದ್ದವರು ಡಿ. 14ರಂದು ಮೈಸೂರಿಗೆ ತೆರಳಿ ಜ. 16ರಂದು ವಾಪಸ್ ಬಂದಾಗ ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಕಪಾಟಿನ ಲಾಕರ್‌ ನಲ್ಲಿ 70,000 ರೂ. ನಗದು, ವಾರ್ಡ್ ರೋಬ್ ನ ಸೂಟ್ಕೇಸ್ ನಲ್ಲಿದ್ದ 2 ಬೆಳ್ಳಿಯ ಬಟ್ಟಲು, 1 ಬೆಳ್ಳಿ ಕಲಶ, 1 ಬೆಳ್ಳಿ ಚಮಚ, 1 ಬೆಳ್ಳಿ ಕಪ್, 20 ಬೆಳ್ಳಿ ನಾಣ್ಯಗಳು, ಬೆಳ್ಳಿಸರ, ಬೆಳ್ಳಿಯ ದೀಪ ಸಹಿತ ಸುಮಾರು 56,000 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!