ಜಿಲ್ಲೆಗೆ ಮಾದರಿಯಾಗಿರುವ "ಬಜರಂಗದಳ ಸೇವಾ ಬ್ರಿಗೇಡ್ ಎಡಪದವು" ಸೇವಾ ಸಂಸ್ಥೆ
ಮಾಸಿಕ ಸೇವಾ ಯೋಜನೆ ಮೂಲಕ ಮಾದರಿಯಾಗಿ ನಿಂತ "ಬಜರಂಗದಳ ಸೇವಾ ಬ್ರಿಗೇಡ್ ಎಡಪದವು"
64 ಮಾಸಿಕ ಸೇವಾ ಯೋಜನೆ, 139 ಕುಟುಂಬಗಳಿಗೆ 41,90,000 ರೂ ಸಹಾಯಧನ

ಮಂಗಳೂರು : ಈ ಸಂಘಟನೆ ನಿಜಕ್ಕೂ ಜಿಲ್ಲೆಗೆ ಮಾದರಿ, ಸೇವೆಯೇ ಪರಮ ಗುರಿ ಎಂದು ಸ್ಥಾಪನೆಯಾದ "ಬಜರಂಗದಳ ಸೇವಾ ಬ್ರಿಗೇಡ್ ಎಡಪದವು" ಸೇವಾ ಸಂಸ್ಥೆಯು ತನ್ನ ಮಾಸಿಕ ಹಾಗೂ ತುರ್ತು ಸೇವಾ ಕಾರ್ಯದಲ್ಲಿ ಹಲವಾರು ಕುಟುಂಬಕ್ಕೆ ನೇರವಾಗಿ ಪ್ರಚಾರದ ಹಂಗಿಲ್ಲದೆ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿದೆ.

ಹಿಂದೂ ಸಮಾಜದ ಆಶಕ್ತರನ್ನು ಗುರುತಿಸಿ, ಸಮಾಜವನ್ನು ಸಶಕ್ತಿಕರಣ ಮಾಡುವ ಕಾರ್ಯದಲ್ಲಿ ತೊಡಗಿರುವ "ಬಜರಂಗದಳ ಸೇವಾ ಬ್ರಿಗೇಡ್ ಎಡಪದವು" ಸಂಸ್ಥೆ ತನ್ನ ಸೇವಾ ಪಯಣದಲ್ಲಿ 64 ಮಾಸಿಕ ಸೇವಾ ಯೋಜನೆಯ ಮೂಲಕ 27 ತುರ್ತು ಯೋಜನೆಯೊಂದಿಗೆ 139 ಕುಟುಂಬಗಳಿಗೆ 41,90,000(ನಲವತ್ತೊಂದು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳು) ಸಹಾಯಧನ ಮಾಡಿದೆ. ಈ ಮೂಲಕ ಜಿಲ್ಲೆಗೆ ಮಾದರಿಯಾಗಿದೆ. 

64 ನೇ ಸೇವಾ ಮಾಸಿಕ ಯೋಜನೆಯ ಹಸ್ತಾಂತರ : ಫಲಾನುಭವಿ ಕುಟುಂಬದ ವಿವರ :-

ಉಡುಪಿ ಜಿಲ್ಲೆ ಬ್ರಹ್ಮಾವರ ಕರ್ದಾಡಿ ನಿವಾಸಿಗಳಾದ ರತ್ನಾಕರ ನಾಯಕ್ ಮತ್ತು ಶಕುಂತಲ ?ವರಿಗೆ ಇಬ್ಬರು ಚಿಕ್ಕ  ಹೆಚ್ಚು ಮಕ್ಕಳಿದ್ದು. ರತ್ನಕರ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು 1 ಕಿಡ್ನಿಯನ್ನು ಅಪರೇಷನ್ ಮಾಡಿ ತೆಗೆಯಲಾಗಿದೆ. ಶಕುಂತಲ ಅವರು ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಾರೆ ಇವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಇವರಿಗೆ ಆರ್ಥಿಕವಾಗಿ ನೆರವಿನ ಅಗತ್ಯವಿರುವ ಕಾರಣ ನೆರವಿಗಾಗಿ ಮನವಿ ಸಲ್ಲಿಸಿದ್ದರು, ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ವತಿಯಿಂದ 50,000 ರೂಪಾಯಿಗಳು ಧನಸಹಾಯ ಸೇವಾ ರೂಪದಲ್ಲಿ ದಿನಾಂಕ: 25-02-2024 ನೀಡಿದ್ದಾರೆ.

ಅಯ್ಯಪ್ಪ ಮಂದಿರ ಶ್ರೀರಾಮನಗರ ಬೋರುಗುಡ್ಡೆ ಮಂದಿರಕ್ಕೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ 25,000 ಮೊತ್ತದ 100 ಚಯರ್ ಹಸ್ತಾಂತರಿಸಿದ್ದಾರೆ. 64 ನೇ ಸೇವಾ ಮಾಸಿಕ ಯೋಜನೆ ಕಾರ್ಯಕ್ರಮದಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಹಾಗೂ ಗೆಳೆಯರ ಬಳಗ ಸುರತ್ಕಲ್ ಇದರ ಸ್ಥಾಪಕ ಅಧ್ಯಕ್ಷರಾದ ಮನೋಜ್ ಕೋಡಿಕೆರೆ ಮತ್ತು ಸಂಸ್ಥೆಯ ಸದಸ್ಯರು, ಪ್ರಮುಖರು ಊರಿನ ಗಣ್ಯರು ಘಟಕದ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

ದಿನಾಂಕ: 26-02-2024ರಂದು ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದ ಜಾತ್ರ ಮಹೋತ್ಸವದ ಅಂಗವಾಗಿ ಪ್ರತಿದಿನ ನಡೆಯುವ ಅನ್ನದಾನ ಸೇವೆ ಕಾರ್ಯ ನಿಧಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಜೈ ಶ್ರೀ ರಾಮ್ ಶಾಖೆ ಎಡಪದವು - ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ ಅನ್ನದಾನ ನಿಧಿಗೆ 50,000 ಸೇವಾ ರೂಪದಲ್ಲಿ ಶ್ರೀ ಕ್ಷೇತ್ರದ ಸ್ವಾಮಿ ಶ್ರೀ ಶ್ರೀ ಶ್ರೀ ಮುಕ್ತನಾಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕರ್ತರು, ಸ್ವಾಮೀಜಿಯವರಿಂದ  ಆಶೀರ್ವಚನ ಪಡೆದು ಸೇವಾ ನಿಧಿ ಸಮರ್ಪಣೆ ಮಾಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!