ಮಂಗಳೂರಿನ ಈಶಿಕಾ ಶೆಟ್ಟಿಗೆ "ಮಿಸ್ ಟೀನ್" ರನ್ನರ್‌ಅಪ್ ಪಟ್ಟ
Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

ಮಂಗಳೂರು: ದೆಹಲಿಯಲ್ಲಿ ನಡೆದ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುವರಿ ಈಶಿಕಾ ಶೆಟ್ಟಿ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ - 2024 ಕಿರೀಟ ಮುಡಿಗೇರಿಸಿದ್ದಾರೆ.

ಗ್ಲೋಬಲ್ ಇಂಡಿಯಾ ಎಂಟರ್‌ಟೈನ್ ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಆಯೋಜಿಸಿರುವ ಈ ಸೌಂದರ್ಯ ಸ್ಪರ್ಧೆ ದೆಹಲಿ ಬಾಲಕಮೋರ ಸ್ಟೇಡಿಯಂನಲ್ಲಿ ಫೆ.22ರಂದು ನಡೆಯಿತು. ಈ ಸೌಂದರ್ಯ ಸ್ಪರ್ಧೆಗೆ ವಿವಿಧ ರಾಜ್ಯಗಳ 65 ಸ್ಪರ್ಧಾಳುಗಳು ಭಾಗವಹಿಸಿದ್ದರು. ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಖ್ಯಾತ ಮಾಡೆಲ್, ಮೆಂಟರ್ ಜತಿನ್ ಕಿರ್ಬಾತ್ ಅಂತಿಮ ಸುತ್ತಿನ ಜ್ಯೂರಿಯಾಗಿ ಪಾಲ್ಗೊಂಡಿದ್ದರು. ದೇಶದ ಒಟ್ಟು 65 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಿ ಈಶಿಕಾ.

ಈಕೆ 2023 ರಲ್ಲಿ “ಮಿಸ್ ಟೀನ್ ಮಂಗಳೂರು” ಆಗಿ, 2023 ರಲ್ಲಿ “ಮಿಸ್ ಟೀನ್ ಕರ್ನಾಟಕ” ಆಗಿ ಆಯ್ಕೆಯಾಗಿದ್ದರು. ಸಣ್ಣಂದಿನಿಂದಲೇ ನಾಟಕದಲ್ಲಿ‌‌ ಅಭಿನಯ ಮತ್ತು ಮಾಡೆಲಿಂಗ್‌ ನಲ್ಲಿ ತುಂಬಾ ಆಸಕ್ತಿ ಇತ್ತು. ಈಗ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ ಈಶಿಕಾ. 

ಮಂಗಳೂರಿನ ಕಾವೂರಿನ ಶಿವನಗರ ನಿವಾಸಿ ಈಶಿಕಾ ಶೆಟ್ಟಿ ಅಲೋಶಿಯಸ್‌ ಕಾಲೇಜಿನಲ್ಲಿ ಸೋಶಿಯಾಲಜಿ ಸೋಶಿಯಲ್ ವರ್ಕ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಆಡಿಷನ್ ನಲ್ಲಿ ಈಶಿಕಾ ಶೆಟ್ಟಿ ಓರ್ವಳೇ ಆಯ್ಕೆಯಾಗಿದ್ದರು. 2022ರಲ್ಲಿ ಮಂಗಳೂರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಮಂಗಳೂರು ಆಗಿ ಹಾಗೂ 2023 ರಲ್ಲಿ ಬೆಂಗಳೂರಿನಲ್ಲಿ ಎನ್.ಬಿ.ಮಾಡೆಲಿಂಗ್ ಮ್ಯಾನೇಜ್ ಮೆಂಟ್ ನಡೆಸಿರುವ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಕರ್ನಾಟಕ 2023 ಪ್ರಶಸ್ತಿ ಗೆದ್ದಿದ್ದಾರೆ. ಬಾಲ್ಯದಿಂದಲೂ ನಟನೆ, ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಈಶಿಕಾ ಶೆಟ್ಟಿ ಮಂಗಳೂರಿನ ಎ.ಎಸ್.ಐ ಆಗಿರುವ ಶರತ್‌ ಕುಮಾ‌ರ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!