ಕೇರಳ: ಎಟಿಎಂ ವಾಹನ ದರೋಡೆ - "ತಿರುಟ್ ತಂಡದ ಕೈವಾಡ"
ಉಪ್ಪಳದ ನಡೆದ ದರೋಡೆ - ತಿರುಟ್ ಗ್ಯಾಂಗ್ ಕೃತ್ಯ

ಉಪ್ಪಳದ ಖಾಸಗಿ ಬ್ಯಾಂಕ್‌ನ ಎಟಿಎಂಗೆ ತುಂಬಿಸಲೆಂದು ಬಂದ ವಾಹನದಿಂದ 50 ಲಕ್ಷ ರೂ. ಹಣ ದರೋಡೆಯಾದ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೃತ್ಯವನ್ನು ತಮಿಳುನಾಡಿನ ತಿರುಟ್ ತಂಡದವರು ಎಂದು ಪೊಲೀಸರಿಗೆ ತಿಳಿದುಬಂದಿದೆ.

ಈ ತಂಡದವರು ಒಂದೇ ಸ್ಥಳದಲ್ಲಿ ನೆಲೆಯೂರದೇ ಅಲೆಮಾರಿಗಳಂತೆ ಅಲೆದಾಡುತ್ತಿರುತ್ತಾರೆ. ದರೋಡೆ ಮಾಡುವ ಮುಂಚೆ ಸ್ಥಳವನ್ನು ಪರಿಚಯ ಮಾಡಿಕೊಂಡು ಸ್ಕೆಚ್ ಹಾಕುತ್ತಾರೆ. ತಿರುಟ್ ತಂಡ ಎಟಿಎಂಗೆ ತುಂಬಿಸಲು ತಂದಿದ್ದ ಹಣವನ್ನು ಕಳವು ಮಾಡಲು ಮಂಗಳೂರಿನಿಂದ ಬಂದು ಕಳವು ಮಾಡಿದ ಬಳಿಕ ಆಟೋ ರಿಕ್ಷಾದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಕೇರಳ ಪೊಲೀಸರು ಕರ್ನಾಟಕ, ತಮಿಳುನಾಡು ಪೊಲೀಸರ ನೆರವು ಯಾಚಿಸಿದ್ದಾರೆ. ಕಳವು, ದರೋಡೆ ಸೇರಿ ಸ್ಪಿರಿಟ್‌ ಸಾಗಾಟ ದಂಧೆ ತಿರುಟ್ ತಂಡದ ಪ್ರಮುಖ ದಂಧೆಯಾಗಿದೆ. ಈ ಎಲ್ಲಾ ಕೃತ್ಯಗಳನ್ನು ನಡೆಸಿ ಇವರೆಲ್ಲರೂ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಈ ತಂಡದಲ್ಲಿ ಸುಮಾರು ೩೦ ಮಂದಿ ಒಳಗೊಂಡಿದ್ದಾರೆ. ಇವರು ಕಳವು, ದರೋಡೆ ಮಾತ್ರವಲ್ಲ ಅಕ್ರಮ ಸ್ಪಿರಿಟ್ ಸಾಗಾಟ ದಂಧೆಯನ್ನೂ ಹೊಂದಿದ್ದಾರೆ. ಹೀಗೆ ಅಡ್ಡ ದಾರಿ ಮೂಲಕ ಲಭಿಸುವ ಹಣವನ್ನು ಉಪಯೋಗಿಸಿ ಐಶಾರಾಮಿ ಜೀವನ ಸಾಗಿಸುವುದು ಇವರ ರೀತಿಯಾಗಿದೆ. ಇವರು ಒಂದೇ ಸ್ಥಳದಲ್ಲಿ ಖಾಯಂ ಆಗಿ ನೆಲೆಗೊಳ್ಳದೆ ಅಲೆಮಾರಿಗಳಾಗಿ ಜೀವಿಸುವ ತಂಡದವರಾಗಿದ್ದಾರೆ. ಒಂದು ಸ್ಥಳದಲ್ಲಿ ಕಳವು ಅಥವಾ ದರೋಡೆ ನಡೆಸಿದ ಬಳಿಕ ಅಲ್ಲಿ ನಿಲ್ಲದೆ ಆ ಪ್ರದೇಶವನ್ನು ಅವರು ತಕ್ಷಣ ಖಾಲಿಮಾಡುತ್ತಾರೆ. ಆದ್ದರಿಂದ ಈ ಕಳವು ತಂಡದವರನ್ನು ಬಂಧಿಸುವುದು ಅಷ್ಟೊಂದು ಸುಲಭಸಾಧ್ಯ ವಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ.

ಕಳವು ಅಥವಾ ದರೋಡೆ ನಡೆಸುವ ಪ್ರದೇಶಗಳಿಗೆ ಮೊದಲೇ ಆಗಮಿಸಿ ಆ ಪ್ರದೇಶವನ್ನು ಕೂಲಂಕುಷವಾಗಿ ಪರಿಶೀಲಿಸಿ ಅದಕ್ಕೆ ಹೊಂದಿಕೊಂಡು ಅಗತ್ಯದ ಸ್ಕೆಚ್ ತಯಾರಿಸಿ ಅದರಂತೆ ಬಳಿಕ ಅಕ್ರಮ ಕೃತ್ಯ ನಡೆಸುವುದು ಇವರ ರೀತಿಯಾಗಿದೆಯೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಉಪ್ಪಳದಲ್ಲಿ ಕಳವು ನಡೆದು ಇಂದಿಗೆ ೯ ದಿನ ಕಳೆದರೂ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರಿಗೆ ಈತನಕ ಸಾಧ್ಯವಾಗಿಲ್ಲ. ಉಪ್ಪಳದಲ್ಲಿ ಕಳವು ನಡೆಸಿದ ಕಳ್ಳರ ದೃಶ್ಯ ಆ ಪ್ರದೇಶದ ಹಲವು ಸಿಸಿಟಿವಿ ಕ್ಯಾಮರಾಗಳಿಂದ ಪೊಲೀಸರಿಗೆ ಲಭಿಸಿದೆ. ಈ ತಂಡ ಮಂಗಳೂರಿನಿಂದ ಬಂದು ಕಳವು ನಡೆಸಿದ ಬಳಿಕ ಆಟೋ ರಿಕ್ಷಾದಲ್ಲಿ ಅಲ್ಲಿಂದ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದರೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಆದರೆ ಕಾಸರಗೋಡಿನಿಂದ ರೈಲಿನಲ್ಲಿ ಬಳಿಕ ಎಲ್ಲಿಗೆ ಹೋದರೆಂಬ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಇನ್ನು ಕಾಸರಗೋಡಿನಿಂದ ರೈಲಿನಲ್ಲಿ ಎಲ್ಲಿಗೆ ಹೋದರೆಂದು ಪೊಲೀಸರಿಗೆ ತಿಳಿದುಬಂದಿಲ್ಲ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!