ಮಂಗಳೂರು: ಮಲಗಿದ್ದಲ್ಲೇ ಮೃತಪಟ್ಟ ಯುವಕ.!
ಹೃದಯಾಘಾತದಿಂದ ನವವಿವಾಹಿತ ಸಾವು

ಉಳ್ಳಾಲ : ಮಲಗಿದ್ದಲ್ಲೇ ಹೃದಯಾಘಾತವಾಗಿ ನವವಿವಾಹಿತ ಮೃತಪಟ್ಟ ಘಟನೆ ಉಳ್ಳಾಲ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ.

ಕನೀರುತೋಟ ನಿವಾಸಿ ಜಿತೇಶ್ (28) ಸಾವನ್ನಪ್ಪಿದವರು.

ಜಿತೇಶ್ ಅವರು ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಏಳದ ಕಾರಣ, ಮನೆಮಂದಿ ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು.  ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!