ಮಾಜಿ ಐಪಿಎಸ್ ಅಣ್ಣಾಮಲೈ ಬಯೋಪಿಕ್‌ನಲ್ಲಿ ತಮಿಳು ನಟ ವಿಶಾಲ್?
ಮಾಜಿ ಐಪಿಎಸ್ ಅಣ್ಣಾಮಲೈ ಬಯೋಪಿಕ್‌ನಲ್ಲಿ ತಮಿಳು ನಟ ವಿಶಾಲ್?

ತಮ್ಮ ಕಟ್ಟುನಿಟ್ಟಾದ ಕಾರ್ಯ ವೈಖರಿ ಮೂಲಕ ‘ಸಿಂಗಂ ಅಣ್ಣ’ ಎಂದೇ ಬಿರುದು ಪಡೆದಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರ ಬಯೋಪಿಕ್ ಮಾಡಲು ಕಾಲಿವುಡ್‌ನಲ್ಲಿ ತಯಾರಿ ಮಾಡಲಾಗುತ್ತಿದೆ. ಅಣ್ಣಾಮಲೈ ಪಾತ್ರಕ್ಕೆ ತಮಿಳಿನ ನಟ ವಿಶಾಲ್ ಕಾಣಿಸಿಕೊಳ್ಳಲಿದ್ದಾರೆ.

ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟ ಬಳಿಕ ರಾಜಕೀಯ ಅಖಾಡದಲ್ಲಿ ಗುರುತಿಸಿಕೊಳ್ತಿದ್ದಾರೆ. ದಕ್ಷ ಅಧಿಕಾರಿ ಆಗಿದ್ದಾಗಲೇ ಹಲವು ಉತ್ತಮ ಕೆಲಸಗಳ ಗಮನ ಸೆಳೆದಿದ್ದ ಸಿಂಗಂ ಅಣ್ಣ ಸದ್ಯ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ತಮಿಳುನಾಡಿನ ಬಿಜೆಪಿ ಲೀಡರ್ ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಸದ್ಯ ಅಣ್ಣಾಮಲೈ ಕುರಿತು ಬಯೋಪಿಕ್ ಬಗ್ಗೆ ಚರ್ಚೆ ಶುರುವಾಗಿತ್ತು. ಅವರ ಪಾತ್ರಕ್ಕೆ ನಟ ವಿಶಾಲ್ ಸೂಕ್ತ ಎಂದು ಆಯ್ಕೆ ಮಾಡಲಾಗಿದೆ. ಈಗಾಗಲೇ ಪೊಲೀಸ್‌ ಪಾತ್ರದಲ್ಲಿ ಖದರ್‌ ತೋರಿಸಿರುವ ವಿಶಾಲ್‌ಗೆ ಅಣ್ಣಾಮಲೈ ಪಾತ್ರ ಕಷ್ಟವಾಗಲ್ಲ ಎಂಬುದು ಹಲವರ ಅಭಿಪ್ರಾಯ.

ನಿರ್ಮಾಣ ಸಂಸ್ಥೆಯೊಂದು ಅಣ್ಣಾಮಲೈ ಬಯೋಪಿಕ್ ಮಾಡಲು ಮುಂದಾಗಿದ್ದು, ವಿಶಾಲ್ ಅವರು ಅಣ್ಣಾಮಲೈ ಪಾತ್ರಕ್ಕೆ ಸೂಕ್ತ ಎಂದು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ವಿಶಾಲ್‌ರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!