ಮಂಗಳೂರು: (ಮೇ.17) ನಾಡಿನ ಶ್ರೇಷ್ಠ ಭಜನಾ ತಂಡಗಳಿಂದ ಕುಣಿತ ಭಜನಾ ಪ್ರದರ್ಶನ
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ಸನಾತನ ಶ್ರೀರಾಮ ಭಜಕರ ಕೂಟದ ಆಶ್ರಯದಲ್ಲಿ ಕುಣಿತ ಭಜನಾ ಪ್ರದರ್ಶನ

ಮಂಗಳೂರು: ಮೇ 17 ಶುಕ್ರವಾರ ಸಂಜೆ 4 ರಿಂದ 8 ರ ವರೆಗೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ಸನಾತನ ಶ್ರೀರಾಮ ಭಜಕರ ಕೂಟದ ಆಶ್ರಯದಲ್ಲಿ ನಾಡಿನ ಶ್ರೇಷ್ಠ ಭಜನಾ ತಂಡಗಳಿ0ದ ಕುಣಿತ ಭಜನಾ ಪ್ರದರ್ಶನ ನಡೆಯಲಿದೆ.

"ಭಜನೆ ಇದ್ದಲ್ಲಿ ವಿಭಜನೆ ಇಲ್ಲಾ" ಎಂಬ ಧ್ಯೇಯದೊಂದಿಗೆ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಬೋಳಾರ ಮಂಗಳೂರು ಪ್ರತಿಷ್ಠಾ ಮಹೋತ್ಸವದ ದಿನದ ಅಂಗವಾಗಿ 2024 -17 ಶುಕ್ರವಾರ ಕುಣಿತ ಭಜನಾ ಪ್ರದರ್ಶನ ಜರಗಲಿದೆ.

ನಗರದ ಖ್ಯಾತ ಮತ್ತು ಹಿರಿಯ ಭಜನಾ ತಂಡಗಳ ಮುಖ್ಯಸ್ಥರ ಉಪಸ್ಥಿತಿಯಲ್ಲಿ ನಾಡಿನ ಶ್ರೇಷ್ಠ ಭಜನಾ ಪ್ರಿಯರ ಮಾರ್ಗದರ್ಶನದಲ್ಲಿ ಭಜನೆಯ ಗತಕಾಲದ ವೈಭವವನ್ನು ಯುವ ಜನತೆಗೆ ನೆನಪಿಸುವ ಒಂದು ಪ್ರಯತ್ನ, ಹಾಗೂ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!