ತೆರೆಯಲ್ಲಿ ಆರ್ಭಟಿಸಲು ಸಿದ್ಧವಾದ "ಬಲಿಪೆ"
ಮೇ 24ಕ್ಕೆ ರಾಜ್ಯಾದಂತ್ಯ ದ್ವಿಭಾಷೆಯಲ್ಲಿ ಬಿಡುಗಡೆ

ಮಂಗಳೂರು: ತುಳುನಾಡಿನಲ್ಲಿ ಮತ್ತೊಂದು ಸಂಚಲನ ಮೂಡಿಸಲು "ಬಲಿಪೆ" ಎನ್ನುವ ಹೊಸ ಚಲನಚಿತ್ರ ಸಿದ್ಧವಾಗಿದೆ. ಹೊಸ ಕಥಾ ಹಂದರದ ಜೊತೆಗೆ ಹೊಸ ಕಲಾವಿದರ ಹೆಚ್ಚೆಯಿಟ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 


ಎಂಡೊಸಲ್ಫಾನ್‌ ದುರಂತ ಮತ್ತು ತುಳುನಾಡಿನ ದೈವ–ದೇವರ ಕಥೆಯನ್ನು ಒಳಗೊಂಡ, ಗಾಯತ್ರಿ ಫಿಲ್ಮ್ ಮೇಕರ್ಸ್ ನಿರ್ಮಿಸಿರುವ ‘ಬಲಿಪೆ’ ತುಳು ಚಿತ್ರ ಮೇ 24ರಂದು ತೆರೆ ಕಾಣಲಿದೆ ಇದು ತುಳುನಾಡಿನಲ್ಲಿ ಹೊಸ ಸಂಚಲನ ಮೂಡಿಸಲಿದೆ. ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ದೈವನರ್ತಕ ದಯಾನಂದ ಕತ್ತಲ್‌ಸಾರ್ ನಿರ್ವಹಿಸಿರುವುದು ಮತ್ತೊಂದು ವಿಶೇಷ. 


ಬಲಿಪೆ ಎಂದರೆ ದೈವದ ವಾಹನ. ನೂರು ಹುಲಿಯ ಶಕ್ತಿ ಇರುವ ಹುಲಿ ಎಂದು ಅರ್ಥ. ಪೆರಾರ ಕ್ಷೇತ್ರ, ಕಾರಿಂಜ, ಬಜಪೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಎರಡು ಹಾಡುಗಳು ಇವೆ. ನಾಯಕ ನಟನಾಗಿ ಹರ್ಷಿತ್ ಬಂಗೇರ, ನಾಯಕಿಯಾಗಿ ಅಂಕಿತಾ ಪಟ್ಲ ಪಾತ್ರ ಮಾಡಿದ್ದು ತಾರಾ ಗಣದಲ್ಲಿ ಪ್ರಾಣ್ ಶೆಟ್ಟಿ, ಐಶ್ವರ್ಯಾ ಆಚಾರ್ಯ, ಗಿರೀಶ್ ಹೆಗ್ಡೆ, ಧೃತಿ ಸಾಯಿ, ಸುದಿಷ್ಣ ಶೆಟ್ಟಿ, ನವೀನ್ ಬೊಂದೆಲ್‌, ದೀಪಕ್ ಸುವರ್ಣ ಇದ್ದಾರೆ. 

ಹೇಮಂತ್ ಸುವರ್ಣ ನಿರ್ಮಿಸಿರುವ ಚಿತ್ರದ ಕಥೆ, ರಚನೆ ಮತ್ತು ನಿರ್ದೇಶನ ಪ್ರಸಾದ್ ಪೂಜಾರಿ ಅರ್ವ ಅವರದು. ರಕ್ಷಿತ್ ಚಿನ್ನು ಮತ್ತು ಉದಯ್ ಬಲ್ಲಾಳ್‌ ಛಾಯಾಗ್ರಹಣ ನೆರವೇರಿಸಿದ್ದು ಆಕಾಶ್ ರೆಡ್ಡಿ ಸಂಗೀತ ನೀಡಿದ್ದಾರೆ. ಕಲಾವತಿ ದಯಾನಂದ್‌, ಅಕ್ಷಯ್ ಜಗದೀಶ್‌ ಮತ್ತು ಅಖಿಲಾ ಪಜಿಮಣ್ಣು ಹಾಡಿದ್ದಾರೆ. ಸುರೇಶ್ ಶೆಟ್ಟಿ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಹಾಗೂ ಹಾಡುಗಳು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!