ಉಡುಪಿ: ಸೇತುವೆಗೆ ಬಸ್ ಡಿಕ್ಕಿ - ತಪ್ಪಿದ ಮಹಾದುರಂತ.!
ಕಲ್ಯಾಣಪುರ ಸೇತುವೆಗೆ ಡಿಕ್ಕಿ ಹೊಡೆದ ಬಸ್

ಉಡುಪಿ : ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುವ ಬಸ್ಸೊಂದು ಸ್ವರ್ಣ ನದಿಯ ಕಲ್ಯಾಣಪುರ ಸೇತುವೆಯ ಗರ್ಡರಗೆ ಡಿಕ್ಕಿ ಹೊಡೆದ ಘಟನೆ ಮೇ 27 ರಂದು ನಡೆದಿದ್ದು, ಸ್ವಲ್ಪದರಲ್ಲೇ ಮಹಾದುರಂತವೊಂದು ತಪ್ಪಿದೆ.

ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುವ ಬಸ್ಸೊಂದು ಸ್ವರ್ಣ ನದಿಯ ಕಲ್ಯಾಣಪುರ ಸೇತುವೆಗೆ ಡಿಕ್ಕಿ ಹೊಡೆದಿದೆ.

ಬಸ್ ಸೇತುವೆಯ ಗರ್ಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಡರ್ ಗೆ ಹಾನಿಯಾಗಿದ್ದು,. ಇನ್ನು ಸ್ವಲ್ಪ ಮುಂದೆ ಬಸ್ ಚಲಿಸಿದ್ದರೆ ಬಸ್ಸು ಪ್ರಯಾಣಿಕರು ನದಿಗೆ ಬಿದ್ದು ಮುಳುಗಡೆ ಸಾಧ್ಯತೆ ಇತ್ತು. ಈ ವೇಳೆ ಸೇತುವೆ ಕೆಳಗಡೆ ದೋಣಿಯಲ್ಲಿ ಮೀನುಗಾರಿಕೆ ಮಾಡುತಿದ್ದ ಶಂಕರ ಇವರ ಮೇಲೆ ಸಿಮೆಂಟು ಕಂಬದ ತುಂಡ್ಡು ಮುರಿದು ಬಿದ್ದು ಕೈಗೆ ಹೊಡೆತ ಬಿದ್ದು ಆಪಾಯದಿಂದ ಪಾರಗಿದ್ದಾರೆ.

 ರಾಷ್ಟ್ರೀಯ ಹೆದ್ದಾರಿ 66 ರ ಕಲ್ಯಾಣಪುರ ಸೇತುವೆ 1963 ರಲ್ಲಿ ನಿರ್ಮಾಣವಾಗಿದ್ದು 6 ದಶಗಳಷ್ಟು ಹಳೆಯದಾಗಿದ್ದು ಇದರ ಮೇಲೆ ಬಹಳಷ್ಟು ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿದೆ. ಸೇತುವೆಯ ಅಡಿಯಲ್ಲಿ ಅಲ್ಲಲ್ಲಿ ಕಾಂಕ್ರೇಟ್ ಬಿರುಕು ಬಿಟ್ಟಿದೆ ಸೇತುವೆಯನ್ನು ಅಡಿಬಾಗದಲ್ಲು ದುರುಸ್ಥಿ ಮಾಡಬೇಕಾಗಿದೆ ಎಂದು ಸ್ಥಳಿಯರು ಅಭಿಪ್ರಾಯ ವ್ಯಕ್ತಪಡಿಸುತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!