ಪುತ್ತೂರು: ವ್ಯಕ್ತಿ ನಾಪತ್ತೆ - ದೂರು ದಾಖಲು
ವ್ಯಕ್ತಿ ನಾಪತ್ತೆ

ಪುತ್ತೂರು: ನಗರದ ಹೊಟೇಲ್‍ವೊಂದರಲ್ಲಿ ಸಪ್ಲಾಯರ್ ಆಗಿರುವ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಶುಕ್ರವಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ನೆಲ್ಲಿಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಬೊಳುವಾರಿನಲ್ಲಿರುವ ಹೊಟೇಲ್‍ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದ ಶಿವಪ್ಪ ಯಾನೆ ಶಿವಣ್ಣ (45) ನಾಪತ್ತೆಯಾದ ವ್ಯಕ್ತಿ.

ಅವರು ಜೂ. 10ರಂದು ಪೇಟೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವರು ಹಿಂದಿರುಗಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಶಿವಪ್ಪ ಅವರ ಪತ್ನಿ ಗೀತಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ನನ್ನ ಗಂಡ ಶಿವಪ್ಪ ಯಾನೆ ಶಿವಣ್ಣ ಅವರು ಬೊಳುವಾರಿನ ಹೊಟೇಲ್‍ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. 

ಜೂ.10ರಂದು ಬೆಳಿಗ್ಗೆ ಅವರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದಿರುಗಿ ಬಂದಿಲ್ಲ. ಈ ಹಿಂದೆಯೂ ಅದೇ ರೀತಿ ಮನೆಯಿಂದ ಹೋದವರು ವಾರ ಕಳೆದು ಬಂದಿದ್ದರು. ಹಾಗಾಗಿ ಅದೇ ರೀತಿ ಅವರು ಹಿಂದಿರುಗಿ ಬರಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಈ ಬಾರಿ ಅವರು ಮನೆಯಿಂದ ಹೋಗಿ 10 ದಿನ ಕಳೆದರೂ ಹಿಂದಿರುಗಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!