ಪಡುಬಿದ್ರಿ ಮಟನ್ ಸ್ಟಾಲ್ ಕಾರ್ಮಿಕ ರಸ್ತೆ ಅಪಘಾತಕ್ಕೆ ಬಲಿ
ಪಡುಬಿದ್ರಿ ಮಟನ್ ಸ್ಟಾಲ್ ಕಾರ್ಮಿಕ ರಸ್ತೆ ಅಪಘಾತಕ್ಕೆ ಬಲಿ

ವರದಿ: ಸುರೇಶ್ ಎರ್ಮಾಳ್

ಪಡುಬಿದ್ರಿ: ಪಡುಬಿದ್ರಿಯ ಭವಾನಿ ಮಟನ್ ಸ್ಟಾಲ್ ನಲ್ಲಿ ಬಹಳಷ್ಟು ವರ್ಷಗಳಿಂದ ದುಡಿಯುತ್ತಿದ್ದ ವ್ಯಕ್ತಿಯೋರ್ವರು ಕಳೆದ ರಾತ್ರಿ ಮುಖ್ಯ ಪೇಟೆಯಲ್ಲಿ ರಸ್ತೆ ದಾಟುತ್ತಿದ್ದಾಗ ಬಸ್ಸೊಂದು ಡಿಕ್ಕಿಯಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಮೃತ ವ್ಯಕ್ತಿ ಹುಬ್ಬಳ್ಳಿ ಮೂಲದ ಸಂಗಪ್ಪ(60), ಇವರ ಸಂಬಂಧಿಗಳು ಹೆದ್ದಾರಿಯ ಪೂರ್ವ ದಿಕ್ಕಿನ ಪದ್ರ ಎಂಬ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮಟನ್ ಅಂಗಡಿಯ ಕೆಲಸ ಮುಗಿದಸಿದ ಇವರು ಸಂಬಂಧಿಗಳ ಮನೆಗೆ ಹೋಗಿ ಮರಳಿ ರಸ್ತೆ ದಾಟುತ್ತಿದಾಗ ಮಂಗಳೂರು ಕಡೆಯಿಂದ ಪೇಟೆ ಪ್ರದೇಶಲ್ಲೂ ನಿಯಂತ್ರಿಸಲಾಗದ ವೇಗದಲ್ಲಿ ಸರ್ಕಾರಿ ಬಸ್ ನ್ನು ಚಲಾಯಿಸಿಕೊಂಡು ಬಂದು ನೇರವಾಗಿ ಅಪ್ಪಳಿಸಿದ್ದು ರಸ್ತೆಗೆ ಎಸೆಯಲ್ಪಟ್ಟಿದ್ದ ಸಂಗಪ್ಪ ದೇಹ ತಲೆ ಕೈ ಕಾಲಿಗೆ ಗಂಭೀರ ಹೊಡೆತ ಬಿದ್ದ ಪರಿಣಾಮ ಕ್ಷಣ ಮಾತ್ರದಲ್ಲೇ ಉಸಿರು ನಿಂತು ಹೋಗಿದೆ.

ಬಸ್ ನ್ನು ವಶಕ್ಕೆ ಪಡೆದ ಪೊಲೀಸರು ಶವವನ್ನು ಪಡುಬಿದ್ರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!