ಕಾಸರಗೋಡು: ಯುವಕ ನಾಪತ್ತೆ ದೂರು ದಾಖಲು
ಕಾಸರಗೋಡು: ಯುವಕ ನಾಪತ್ತೆ ದೂರು ದಾಖಲು

ವಿದೇಶದಿಂದ ಊರಿಗೆ ಹೊರಟಿದ್ದ ಬದಿಯಡ್ಕದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ನಾಪತ್ತೆ ದೂರು ನೀಡಲಾಗಿದೆ. ವಿದ್ಯಾಗಿರಿ ಮುನಿಯೂರಿನ ಮುಹಮ್ಮದ್ ಸಿದ್ದೀಕ್ (28) ನಾಪತ್ತೆಯಾದವರು.

ಸಿದ್ದೀಕ್ ಸೆ.25 ರಂದು ಗಲ್ಫ್ನಿಂದ ಊರಿಗೆ ತಲಪುವುದಾಗಿ ಮನೆಯವರಿಗೆ ತಿಳಿಸಿದ್ದರು. ಅಂದು ಕೋಜಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿದ್ದೀಕ್ ಮನೆಗೆ ತಲಪಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. 

ಅಂದು ರಾತ್ರಿ ಸಿದ್ದೀಕ್ ನನ್ನು ವಿಚಾರಿಸಿ ತಂಡವೊAದು ಮನೆಗೆ ಬಂದಿದ್ದು, ಕೋಜಿ ಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಳಿಕ ಯಾರಾದರೂ ಅಪಹರಿಸಿದ್ದಾರೆ ಅಥವಾ ಬೇರೆ ಎಲ್ಲಿಗಾದರೂ ತೆರಳಿರಬಹುದೇ ಎಂಬ ಸಂಶಯ ಉಂಟಾಗಿದೆ. ತಂದೆ ಯೂಸಫ್ ನೀಡಿ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!