ಮಂಗಳೂರು: ಶಾಲಾ ಬಸ್‌ ಚಾಲಕ ಹಾಗೂ ಟೋಲ್‌ಗೇಟ್‌ ಸಿಬ್ಬಂದಿ ನಡುವೆ ಮಾತಿನ ಚಕಮಕಿ
ಸುರತ್ಕಲ್‌ ಟೋಲ್‌ ಗೇಟ್‌ ಬಳಿ ಮಾತಿನ ಚಕಮಕಿ

ಸುರತ್ಕಲ್‌: ಸುಂಕ ನೀಡುವ ವಿಚಾರವಾಗಿ ಶಾಲಾ ಬಸ್‌ ಸಿಬ್ಬಂದಿ ಹಾಗೂ ಸುರತ್ಕಲ್‌ ಟೋಲ್‌ಗೇಟ್‌ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದ ಘಟನೆ ಸುರತ್ಕಲ್‌ ಟೋಲ್‌ ಗೇಟ್‌ ಬಳಿ ನಡೆದಿದೆ.

ಸುಮಾರು 6 ಬಸ್‌ಗಳಲ್ಲಿ ಶಾಲೆಯೊಂದರ ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದು, ಈ ಬಸ್‌ಗಳು ಸುರತ್ಕಲ್‌ ಟೋಲ್‌ಗೇಟ್‌ ಮುಂಭಾಗ ಬರುತ್ತಿದ್ದಂತೆಯೇ ಟೋಲ್‌ ಸಿಬ್ಬಂದಿ ಟೋಲ್‌ ಸುಂಕ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ,ಬಸ್‌ ಸಿಬ್ಬಂದಿ "ಇದು ಅಕ್ರಮ ಟೋಲ್‌ಗೇಟ್‌. ಇದರ ತೆರವಿಗೆ ಕೇಂದ್ರ ಸರಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಹೀಗಿರುವಾಗ ಸುಂಕ ಪಡೆಯುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಟೋಲ್‌ ಸಿಬ್ಬಂದಿ ಮತ್ತು ಬಸ್‌ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಹೊಡೆದಾಟದವರೆಗೂ ತಲುಪಿತ್ತು ಎಂದು ತಿಳಿದುಬಂದಿದೆ. ಸುಮಾರು 6 ಬಸ್‌ಗಳು ಏಕಕಾಲದಲ್ಲಿ ಟೋಲ್‌ ಗೇಟ್‌ ಬಳಿ ಬಂದಿದ್ದ ಕಾರಣ ಸುಮಾರು ಅರ್ಧ ಗಂಟೆಗಳ ಕಾಲ ಟೋಲ್‌ಗೇಟ್‌ ಬಳಿ ಮಂಗಳೂರು ಕಡೆ ತೆರಳುತ್ತಿದ್ದ ವಾಹನಗಳು ಬಾಕಿಯಾಗಿದ್ದವು ಎನ್ನಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!