ಮಂಗಳೂರು: "ಮುಸ್ಲಿಂ ವಿದ್ಯಾರ್ಥಿಯೊಂದಿಗೆ ಹಿಂದೂ ವಿದ್ಯಾರ್ಥಿನಿ ಸರಸಸಲ್ಲಾಪ"
ಬಜರಂಗದಳ ಕಾರ್ಯಕರ್ತರ ಕಾರ್ಯಚರಣೆ

ಮಂಗಳೂರು: ಮುಸ್ಲಿಂ ವಿದ್ಯಾರ್ಥಿಯೊಂದಿಗೆ  ಹಿಂದೂ ವಿದ್ಯಾರ್ಥಿನಿ ತಿರುಗುತ್ತಿದ್ದ ಘಟನೆ ಬಲ್ಲಾಲ್ಬಾಗ್  ಬಳಿ ನಡೆದಿದ್ದು, ಬಜರಂಗದಳ ಕಾರ್ಯಕರ್ತರ ಕಣ್ಣಿಗೆ ಬಿದ್ದಿದ್ದಾರೆ. 

ಹಿಂದು ವಿದ್ಯಾರ್ಥಿನಿ ಮುಸ್ಲಿಂ ಯುವಕನೊಂದಿಗೆ ಬಲ್ಲಾಲ್ಬಾಗ್ ಕೆಫೆಯೊಂದರಲ್ಲಿ ಸಿಕ್ಕಿಬಿದ್ದಿದ್ದು, ಬಜರಂಗದಳ ಕಾರ್ಯಕರ್ತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಜೋಡಿಯನ್ನ ಬರ್ಕೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಅಲೋಶಿಯಸ್‌ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಫಾಝಿಲ್‌ ಎಂಬ ಯುವಕನೊಂದಿಗೆ ಹಿಂದೂ ಯುವತಿಯ ಸರಸಸಲ್ಲಾಪ ಎನ್ನಲಾಗಿದೆ. 

ಪದೇ ಪದೇ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಕಾರಣ ಹಿಂದೂ ಸಂಘಟನೆಗಳು ಹಿಂದೂ ಹುಡುಗಿಯರ ರಕ್ಷಣೆ ವಿಷಯದಲ್ಲಿ ಹದ್ದಿನ ಕಣ್ಣಿಟ್ಟಿರುವುದರಿಂದ ಇಂತಹ ಪ್ರಕರಣಗಳು ಮಂಗಳೂರಿನಲ್ಲಿ ಬೆಳಕಿಗೆ ಬರುತ್ತಿವೆ. ಹಲವು ದಿನಗಳಿಂದ ಮಂಗಳೂರಿನ ಅಸುಪಾಸಿನಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಇಂದು ಕೂಡ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಬಲ್ಲಾಲ್ಬಾಗ್ ಬಳಿ ಬಜರಂಗದಳ ಕಾರ್ಯಕರ್ತರ ಕಣ್ಣಿಗೆ ಬಿದ್ದಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಜೋಡಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. 

VIDEO NEWS::  https://youtu.be/REcNUNfGTRI

 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!