ಕಟೀಲು ದೇವಿಯ ದರ್ಶನ ಪಡೆದ ಕಿಚ್ಚ ಸುದೀಪ್
ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಕಿಚ್ಚ ಸುದೀಪ್

ಮಂಗಳೂರು: ಖ್ಯಾತ ನಟ ಸುದೀಪ್ ಪತ್ನಿ ಪ್ರಿಯಾ ಜೊತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸುದೀಪ್ ಹಾಗೂ ಅವರ ಪತ್ನಿ ಕಟೀಲು ದುರ್ಗಾ ಪರಮೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಸ್ಥಾನದ ವತಿಯಿಂದ ಸುದೀಪ್‌ಗೆ ಆತ್ಮೀಯ ಗೌರವ ಸಮರ್ಪಿಸಲಾಯಿತು.

ನಂತರ ಮಾತನಾಡಿದ ನಟ ಸುದೀಪ್ ‘ದ.ಕ ಜಿಲ್ಲೆಗೆ ಬಂದು ಕನ್ನಡ ಮಾತಾಡೋಕೂ ಕಷ್ಟ ಆಗುತ್ತೆ. ಇಲ್ಲಿ ಕಾಲಿಡುತ್ತಿದ್ದಂತೆ ಪಾಸಿಟಿಟವ್ ಫೀಲ್ ಆಗಿದ್ದು ಈ ಸಿಂಪಲ್ ದೇವಸ್ಥಾನ. ಈ ದೇಗುಲದ ಸಿಂಪ್ಲಿಸಿಟಿ ನನಗೆ ತುಂಬಾ ಇಷ್ಟವಾಯಿತು. ಮತ್ತೆ ಮತ್ತೆ ಕಟೀಲಿಗೆ ಬರ್ಬೇಕು ಅನಿಸಿದೆ. ಖಂಡಿತಾ ಬರುತ್ತೇನೆ ಎಂದರು.

   

You may also like

Comments

https://newsdaksha.online/assets/images/user-avatar-s.jpg

0 comment

Write the first comment for this!