ಗುಜರಾತ್ ನಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ
ಮತ ಚಲಾಯಿಸಿದ ಪ್ರಧಾನಿ ಮೋದಿ

ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಸೋಮವಾರ ಬೆಳಗ್ಗೆ ಆರಂಭವಾಗಿದ್ದು, ಜನರು ಮತದಾನ ಮಾಡುತ್ತಿದ್ದಾರೆ. ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದ್ದಾರೆ.

ಪ್ರಧಾನಿಯವರು ನಿಶಾನ್ ಪಬ್ಲಿಕ್ ಸ್ಕೂಲ್‌ನಲ್ಲಿರುವ ಮತಗಟ್ಟೆಗೆ ನೆರೆದಿದ್ದ ಜನಸಮೂಹದತ್ತ ನಡೆದುಕೊಂಡು ಹೋಗಿ ದಾರಿಯಲ್ಲಿದ್ದ ಜನರಿಗೆ ನಮಸ್ಕರಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ನಂತರ ಅವರು ಮತದಾನ ಕೇಂದ್ರದ ಬಳಿ ಇರುವ ತಮ್ಮ ಅಣ್ಣ ಸೋಮ ಮೋದಿ ಅವರ ಮನೆಗೆ ತೆರಳಿದರು. "ಪ್ರಜಾಪ್ರಭುತ್ವದ ಹಬ್ಬ"ವನ್ನು ಆಚರಿಸುತ್ತಿರುವ ಮತದಾರರಿಗೆ ಮತ್ತು ಭಾರತದ ಚುನಾವಣಾ ಆಯೋಗವನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

ಗುಜರಾತ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಮತದಾರರು ಈ ಪ್ರಜಾಪ್ರಭುತ್ವದ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ಭರವಸೆಯಿಂದ ಆಚರಿಸಿದ್ದಾರೆ. ಈ ಪ್ರಜಾಪ್ರಭುತ್ವದ ಆಚರಣೆಗಾಗಿ ನಾನು ದೇಶದ ಜನರನ್ನು ಅಭಿನಂದಿಸುತ್ತೇನೆ. ಇಷ್ಟು ಭವ್ಯವಾಗಿ ಚುನಾವಣೆಗಳನ್ನು ನಡೆಸುವುದಕ್ಕಾಗಿ ನಾನು ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇನೆ. ಚುನಾವಣೆಗಳನ್ನು ನಡೆಸುವ ಸಂಪ್ರದಾಯ ವಿಶ್ವದಲ್ಲಿ ನಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ”ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಂದು ಅಹಮದಾಬಾದ್‌ನಲ್ಲಿ ಮತದಾನ ಮಾಡಲಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!