ಸುರತ್ಕಲ್: "ಅನಾಥ ಮಗು ಪತ್ತೆ" - ಪೋಷಕರ ಬಿಟ್ಟು ಹೋಗಿರುವ ಶಂಕೆ.!
"ಅನಾಥ ಮಗು ಪತ್ತೆ" - ಪೋಷಕರ ಬಿಟ್ಟು ಹೋಗಿರುವ ಶಂಕೆ.!

ಸುರತ್ಕಲ್: ಸುರತ್ಕಲ್ ಬಸ್‌ ನಿಲ್ದಾಣ ಸನಿಹದಲ್ಲಿ ಮೂರು ವರ್ಷದ ಮಗುವೊಂದು ಸಾರ್ವಜನಿಕರಿಗೆ ಪತ್ತೆಯಾಗಿದ್ದು, ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಮಗುವನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಮಗು ಬೋಳು ತಲೆಯಲ್ಲಿದ್ದು, ಗುಲಾಬಿ ಬಣ್ಣದ ಅಂಗಿ ಧರಿಸಿದೆ.

ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಸಾರ್ವಜನಿಕರು ಪೊಲೀಸರಿಗೆ ಕೋರಿದ್ದು, ಮಗುವನ್ನು ಕಳೆದುಕೊಂಡ ಪೋಷಕರು ಸುರತ್ಕಲ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಯಾರಾದರೂ ಮಗುವನ್ನು ಕಳೆದುಕೊಂಡಿದ್ದಲ್ಲಿ ಸುರತ್ಕಲ್ ಠಾಣಾ ಫೋನ್ ದೂ.ಸಂ.- 0824-2220540, ಪೊಲೀಸ್ ನಿರೀಕ್ಷಕರ ಮೊ.ಸಂ.- 9480805360, ಪೊಲೀಸ್ ಉಪನಿರೀಕ್ಷಕ- 9480802344, ನಗರ ನಿಸ್ತಂತು ನಿಯಂತ್ರಣ ಕೊಠಡಿ ಮೊ. 9480802321 ಅಥವಾ ಮಹಿಳಾ ಸಮನ್ವಯ ಅಧಿಕಾರಿ ಮೊ.: 9448332713ನ್ನು ಸಂಪರ್ಕಿಸುವಂತೆ ಸುರತ್ಕಲ್ ಠಾಣೆಯ ಪ್ರಕಟನೆ ತಿಳಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!