ಸಮಾಜ ಸೇವೆಗೆಂದು ಸ್ಥಾಪಿತವಾದ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು
51ನೆ ಮಾಸಿಕ ಸೇವಾ ಯೋಜನೆಯಲ್ಲಿ 31ಲಕ್ಷದ 60ಸಾವಿರ ಸಹಾಯಧನ

ಮಂಗಳೂರು: ಸೇವೆಯ ಪರಮ ಗುರಿಯನ್ನು ಇಟ್ಟುಕೊಂಡು ಸ್ಥಾಪನೆಯಾದ "ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಮಂಗಳೂರು" ಸೇವಾ ಸಂಸ್ಥೆಯು ತನ್ನ ಮಾಸಿಕ ಹಾಗೂ ತುರ್ತು ಸೇವಾ ಕಾರ್ಯದಲ್ಲಿ ಹಲವಾರು ಕುಟುಂಬಕ್ಕೆ ನೇರವಾಗಿ ಪ್ರಚಾರದ ಹಂಗಿಲ್ಲದೆ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿದೆ.

ತನ್ನ ಸೇವಾ ಪಯಣದಲ್ಲಿ 51 ಮಾಸಿಕ ಸೇವಾ ಯೋಜನೆಯ ಮೂಲಕ 19 ತುರ್ತು ಯೋಜನೆಯೊಂದಿಗೆ 113 ಕುಟುಂಬಗಳಿಗೆ ₹31,60,000 ( ಮೂವತ್ತೊಂದು ಲಕ್ಷದ ಅರವತ್ತು ಸಾವಿರ ರೂಪಾಯಿಗಳು) ಸಹಾಯಧನ ಮಾಡಿದೆ.

51 ನೇ ಸೇವಾ ಮಾಸಿಕ ಯೋಜನೆಯ ವಿವರ

ಹಿಂದುಗಳನ್ನು ಒಂದುಗೊಡಿಸುವ ಮೂಲಕ, ಹಿಂದು ಧರ್ಮವನ್ನು ಇಡೀ ವಿಶ್ವದಲ್ಲಿ ರಕ್ಷಿಸುವ ಉದ್ದೇಶದೊಂದಿಗೆ, ಋಷಿ-ಮುನಿಗಳ ಆಶಿರ್ವಾದದೊಡನೆ, 29 ಆಗಸ್ಟ್, 1964 ರಂದು ವಿಶ್ವ ಹಿಂದು ಪರಿಷತ್ ನ ಸ್ಥಾಪನೆಯಾಗಿ ನಿರಂತರವಾಗಿ ಬೆಳೆಯುತ್ತ, ಇಂದು ವಿ.ಹಿಂ.ಪ, ಲಕ್ಷಾಂತರ ನಗರ-ಗ್ರಾಮಗಳಲ್ಲಿ ಅಸ್ತಿತ್ವ ಹೊಂದಿದೆ. ವಿಶ್ವದೆಲ್ಲೆಡೆ ಹಿಂದು ಚಟುವಟಿಕೆ ನಡೆಸುವ ಮೂಲಕ, ವಿ.ಹಿಂ.ಪ ಒಂದು ಬೄಹತ್ ಹಿಂದು ಸಂಘಟನೆಯಾಗಿ ಮಾರ್ಪಡಾಗಿದೆ ಶಿಕ್ಷಣ, ಸ್ವಾವಲಂಬನೆ, ಗ್ರಾಮ ಶಿಕ್ಷಾ ಮಂದಿರ ಎಂಬಿತ್ಯಾದಿ 32,000 ಕ್ಕೊ ಹೆಚ್ಚು ಸೇವಾ ಚಟುವಟಿಕೆಗಳ ಮುಖೇನ, , ವಿ.ಹಿಂ.ಪ ಹಿಂದು ಧರ್ಮದ ಬೇರುಗಳನ್ನು ಸದೄಢಗೊಳಿಸುತ್ತಿದೆ ವಿಶ್ವ ಹಿಂದೂ ಪರಿಷತ್ ಈ ಮಹೋತ್ತರ ಕಾರ್ಯದ ಸೇವಾನಿಧಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ ₹ 50,0000 ಸೇವಾ ನಿಧಿ ಪ್ರಖಂಡದ ಪ್ರಮುಖರ ಉಪಸ್ಥಿತಿಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಸೇವಾ ನಿಧಿಯನ್ನು ನೀಡಲಾಯಿತು.

ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ತಂಡದ ಆರಾಧ್ಯ ದೇವರಾದ ಪ್ರಭು ಶ್ರೀ ರಾಮ ದೇವರ ಮಂದಿರದ ಅನ್ನದಾನ ನಿಧಿಗೆ ₹ 25,000 ಸಾವಿರ ರೂಪಾಯಿಯನ್ನು ನೀಡಿದೆ.

ಫಲಾನುಭವಿ ಕುಟುಂಬ 1

ಕುಪ್ಪೆಪದವು ನಿವಾಸಿಯಾದ ನಿತೀಶ್ ಪೂಜಾರಿ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಿದ್ದು ಇವರ ತಂದೆ ಜಯ ಪೂಜಾರಿ ಇವರಿಗೆ ಲಿವರ್ ಫೇಲ್ಯೂರ್, ಕಿಡ್ನಿ ವೈಫಲ್ಯ ಮತ್ತು ಜಾಂಡೀಸ್ ಸಮಸ್ಯೆಯಿಂದ ತೀರಿಕೊಂಡರು ಇವರು ಚಿಕಿತ್ಸೆ ಗಾಗಿ ಇದುವರೆಗೆ ಲಕ್ಷ ಗಟ್ಟಲೆ ಖರ್ಚು ಆಗಿದೆ ಕುಟುಂಬ ತುಂಬಾ ಬಡತನದಲ್ಲಿ ಇದ್ದು ಇವರು ಕಾಲೇಜು ವಿದ್ಯಾರ್ಥಿ ಯಾಗಿದ್ದು ತನ್ನ ತಂದೆಯೇ ಈ ಕುಟುಂಬಕ್ಕೆ ಆಧಾರವಾಗಿದ್ದರು ಜೀವನ ನಡೆಸಲು ಕಷ್ಟವಾಗಿರುತ್ತದೆ ಇವರು ಮಂಗಳೂರು ಸಮೀಪದ ಗುರುಪುರ ಕೈಕಂಬದಲ್ಲಿ ಸಣ್ಣ ಒಂದು ದೋಸೆ ಸ್ಟಾಲ್ ಇಟ್ಟಿದ್ದು ಬೆಳಿಗ್ಗೆ ಕಾಲೇಜು ಮುಗಿಸಿ ಸಂಜೆ ದೋಸೆ ವ್ಯಾಪಾರ ಮಾಡುತ್ತಿರುವುದರಿಂದ ತನ್ನ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಸಹಾಯ ಆಗಿದೆ ತಂದೆಯ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆಗೆ ಸಾಲ ಮಾಡಿದ ಹಣ ತೀರಿಸಲು ಪರದಾಡುತ್ತಿದ್ದಾರೆ ತನಗೆ ಬರುವ ಆದಾಯದಿಂದ ಈ ಖರ್ಚನ್ನು ನಿಭಾಯಿಸಲು ಅಸಾಧ್ಯವಾಗಿರುವುದು. ಆರ್ಥಿಕ ಸಂಕಷ್ಟವು ಈ ಕುಟುಂಬ ವರ್ಗಕ್ಕೆ ಎದುರಾಗಿದ್ದು ತಮ್ಮೆಲ್ಲರ ಸಹಕಾರವನ್ನು ಈ ಮೂಲಕ ಕುಟುಂಬ ವರ್ಗವು ಯಾಚಿಸುತ್ತಿದೆ. ಜೀವನದಲ್ಲಿ ಅದೆಷ್ಟೋ ಕನಸುಗಳನ್ನು ಹೊತ್ತಿರುವ ಇವರು ತಾಯಿ ತನ್ನಿಬ್ಬರು ಮಕ್ಕಳ ಜೀವನವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುತ್ತಾರೆ ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ ₹50,000 ಸಾವಿರ ರೂಪಾಯಿ ಸೇವಾ ರೂಪದಲ್ಲಿ ಧನಸಹಾಯ ನೀಡಿದೆ

ಕುಟುಂಬ 2

ರಮೇಶ್ ಬೋರುಗುಡ್ಡೆ

ಎಡಪದವು ಸಮೀಪದ ಬೋರುಗುಡ್ಡೆ ನಿವಾಸಿಯಾದ ರಮೇಶ್ ವೃತ್ತಿಯಲ್ಲಿ ಸೆಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದು 1 ತಿಂಗಳ ಹಿಂದೆ ನಡೆದ ವಾಹನ ಅಪಘಾತದಲ್ಲಿ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಗೆ ಮಾಡಿ ರಾಡ್ ಹಾಕಿದ್ದು ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ ₹25,000 ಸಾವಿರ ರೂಪಾಯಿ ಸೇವಾ ರೂಪದಲ್ಲಿ ಧನಸಹಾಯ ನೀಡಿದೆ.

ಕುಟುಂಬ 3

ಸೀತಾ ಗಾಂಧಿನಗರ ಗಂಜಿಮಠ ಸಮೀಪದ ಗಾಂಧಿನಗರ ನಿವಾಸಿಯಾದ ಸೀತಾ ಇವರು ಪಾರ್ಶ್ವವಾಯು ನಿಂದ ಬಳಲುತ್ತಿದ್ದು ಇವರ ಗಂಡ ಕೂಡ ಅನಾರೋಗ್ಯದಿಂದ ಮನೆಯಲ್ಲಿಯಲ್ಲಿದ್ದು ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದು ಇವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇವರಿಗೆ ತುರ್ತು ಸೇವಾ ಯೋಜನೆಯ ಮೂಲಕ ₹10,000 ಸಾವಿರ ರೂಪಾಯಿ ಸೇವಾ ರೂಪದಲ್ಲಿ ಧನಸಹಾಯ ನೀಡಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!