ಉಡುಪಿ: ಸರ್ಕಾರಿ ಕಚೇರಿಗೆ ನುಗ್ಗಿದ ಖದೀಮರು - ದಾಖಲೆಗಳು ಕಳ್ಳರ ಪಾಲು
ಸರ್ಕಾರಿ ಕಚೇರಿಗೆ ಕಳ್ಳರ ಲಗ್ಗೆ ಅಮೂಲ್ಯ ಕಡತಗಳು ಮಾಯ.!

ಉಡುಪಿ : ಉಡುಪಿಯಲ್ಲಿ ಸರ್ಕಾರಿ ಕಚೇರಿಗೆ ನುಗ್ಗಿದ ಕಳ್ಳರು ಅತ್ಯಮೂಲ್ಯ ದಾಖಲೆಗಳನ್ನು ಖದೀಮರು ಕೊಂಡೊಯ್ದ ಘಟನೆ ಬೆಳಕಿಗೆ ಬಂದದೆ.

ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟಿದ್ದ ಬನ್ನಂಜೆಯಲ್ಲಿರುವ ಗಾಂಧಿ ಭವನದಲ್ಲಿ ಶೇಖರಿಸಿ ಇಟ್ಟಿದ್ದ ದಾಖಲೆಗಳು ಕಳ್ಳರ ಪಾಲಾಗಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿ ಭವನದಲ್ಲಿ ತಾಲೂಕು ಕಚೇರಿಯ ದಾಖಲೆಗಳನ್ನು ಹಿಂದಿನಿAದಲೂ ಅಧಿಕಾರಿಗಳು ಶೇಖರಿಸಿಡುತ್ತಿದ್ದರು ಎನ್ನಲಾಗಿದೆ, ಆ.15ರಿಂದ ಸೆ.26ರ ನಡುವೆ ಗಾಂಧಿ ಭವನದ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದ್ದು ಈ ಬಗ್ಗೆ ಉಡುಪಿ ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕ ನಟರಾಜ್ ನಗರ ಠಾಣೆಗೆ ದೂರು ನೀಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!