ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಮಹತ್ವದ ನಿರ್ಧಾರ
ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಮರು ಆಯ್ಕೆ

2023ರ ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಬದಲಾಗುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಬಿಸಿಸಿಐ ಇದೀಗ ಉತ್ತರ ನೀಡಿದೆ. ಬುಧವಾರ ಮಹತ್ವದ ಘೋಷಣೆ ಮಾಡಿರುವ ಬಿಸಿಸಿಐ, ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ಉಳಿಸಿಕೊಂಡಿದೆ.

2021 ರ ನವೆಂಬರ್ ನಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದರು. ಇವರ ಅಧಿಕಾರವಧಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. 2023ರ ಟೆಸ್ಟ್ ಚಾಂಪಿಯನ ಫೈ ನಲ್ ಗೆ ಪ್ರವೇಶ ಮಾಡಿ ಟೀಮ್ ಇಂಡಿಯಾ ರನ್ನರ್ ಅಪ್ ಗಳಿಸಿತ್ತು.

ಇದರ ಜೊತೆ ಮೊನ್ನೆ ನಡೆದ ಏಕದಿನ ವಿಶ್ವಕಪ್ ನಲ್ಲೂ ಭಾರತ ಅದ್ಭುತ ಪ್ರದರ್ಶನ ನೀಡಿ, ಫೈನಲ್‌ನಲ್ಲಿ ಆಸ್ಟ್ರೇ ಲಿಯಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು. ಹಾಗಾಗಿ ಅವರನ್ನೇ ಮುಖ್ಯ ಕೋಚ್ ಆಗಿ ಮುಂದಿನ ಎರಡು ವರ್ಷಗಳ ಮುಂದುವರೆಸುವ ಒಲವು ತೋರಿತ್ತು. ಇದೀಗ ಮತ್ತೆ ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಿ, ರಾಹುಲ್ ಅವರನ್ನೇ ಮುಖ್ಯ ಕೋಚ್ ಆಗಿ ಮುಂದುವರೆಸುವುದಾಗಿ ಹೇಳಿ, ಅವರ ಅಧಿಕಾರವಧಿಯನ್ನು ಎರಡು ವರ್ಷಕ್ಕೆ ವಿಸ್ತರಣೆ ಮಾಡಿದೆ.

ದ್ರಾವಿಡ್‌ಗೆ ಮತ್ತೆ ಮುಖ್ಯ ಕೋಚ್‌ನ ಜವಾಬ್ದಾರಿ ಏಕೆ?

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಕೂಡ ರಾಹುಲ್ ದ್ರಾವಿಡ್ ಮತ್ತೊಮ್ಮೆ ಈ ಹುದ್ದೆಯನ್ನು ಅಲಂಕರಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ದ್ರಾವಿಡ್ ಅವರ ಅವಧಿ ಅದ್ಭುತವಾಗಿದೆ ಎಂದಿರುವ ಜಯ್ ಶಾ, ‘ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಮತ್ತು ಇದರಲ್ಲಿ ರಾಹುಲ್ ದ್ರಾವಿಡ್ ಪಾತ್ರ ದೊಡ್ಡದಾಗಿದೆ. ಈ ಪ್ರದರ್ಶನದಿಂದಾಗಿ ರಾಹುಲ್ ದ್ರಾವಿಡ್ ಮತ್ತೆ ಮುಖ್ಯ ಕೋಚ್ ಆಗಲು ಅರ್ಹರಾಗಿದ್ದಾರೆ ಎಂದಿದ್ದಾರೆ. ಹಾಗೆಯೇ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕೂಡ ರಾಹುಲ್ ದ್ರಾವಿಡ್‌ಗೆ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುವುದು ಎಂದಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!