ಅಗಲಿದ ಪತ್ನಿಯ ಪ್ರತಿಕೃತಿಯೊಂದಿಗೆ ವಿವಾಹದ ರಜತ ಸಂಭ್ರಮಾಚರಣೆ
ಅಗಲಿದ ಪತ್ನಿಯ ಛಾಯಚಿತ್ರದ ಪ್ರತಿಕೃತಿಯೊಂದಿಗೆ ವಿವಾಹದ ರಜತ ಸಂಭ್ರಮಾಚರಣೆ

ಕುಂದಾಪುರ: ಅನಾರೋಗ್ಯದಿಂದ ಅಗಲಿದ ಪತ್ನಿಯ ಛಾಯಚಿತ್ರದ ಪ್ರತಿಕೃತಿ ಇಟ್ಟು ದಾಂಪತ್ಯ ಜೀವನದ ಬೆಳ್ಳಿಹಬ್ಬವನ್ನು ಆಚರಿಸಿಕೊಂಡ ಅಪರೂಪದ ಕಾರ್ಯಕ್ರಮ ಕುಂದಾಪುರದ ಬಡಾಕೆರೆಯ ಹಾಲ್‌ನಲ್ಲಿ ನಡೆಸಿ, ಮಾದರಿ ಪತಿ ಎನಿಸಿಕೊಂಡಿದ್ದಾರೆ.

ಬಡಾಕೆರೆ ಲಕ್ಷ್ಮೀ ಜನಾರ್ದನ ಸಭಾಭವನ ಬುಧವಾರ ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು. ಅಗಲಿದ ಪತ್ನಿ ಬಯಕೆಯಂತೆ ದಾಂಪತ್ಯ ಜೀವನದ ರಜತ ಸಂಭ್ರಮ ಪತ್ನಿ ಸುಮಾ ಅವರ ಛಾಯಾ ಪ್ರತಿಕೃತಿ ಜೊತೆ ಆಚರಿಸಿಕೊಂಡ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕುಂದಾಪುರ ಸಪ್ತಗಿರಿ ಕೋಆಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಇಂತಾದ್ದೊAದು ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ವಿವಾಹ ಮಹೋತ್ಸವ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸುಮಾ ಸಲಹೆಯನ್ನು ಪತಿ ಪಾಲಿಸಿದ್ದಾರೆ. ಆದರೆ ಸಮಾ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಚಂದ್ರಶೇಖರ್ ಪತ್ನಿ ಆಶಯದಂತೆ ಈಡೇರಿಸಿ, ಮಾದರಿ ಪತಿಯಾಗಿದ್ದಾರೆ.

ಪತ್ನಿಯಷ್ಟೇ ಎತ್ತರ ಅಳತೆಯ ಛಾಯಾಪ್ರತಿಕೃತಿ ನಿರ್ಮಿಸಿ ಪತ್ನಿಯ ಬಯಕೆ ಈಡೇರಿಸಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿ ಯಾಗಿದ್ದರು. ಪತಿ ಹಾಗೂ ಹೆಣ್ಣು ಮಕ್ಕಳ ನಡುವೆ ನಿಲ್ಲಿಸಿದ ಸುಮಾ ಛಾಯಾ ಪ್ರತಿಕೃತಿ ಎನ್ನುವುದು ಗೊತ್ತಾಗದಷ್ಟು ನೈಜವಾಗಿದ್ದರೆ, ಭಾಗವಹಿಸಿದವರ ಹಾರೈಸಿದವರ ಕಣ್ಣೀರಿನೊಟ್ಟಿಗೆ ನಗುವೂ ಇತ್ತು ಎಂಬುದು ವಿಶೇಷ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!