ಪ್ರಧಾನಿ ಮೋದಿ ಪಕ್ಕದಲ್ಲಿ ಕುಳಿತಿರುವ ಗಡ್ಡಧಾರಿ ಯಾರು?
ಮೋದಿ ನಾಮಪತ್ರ ಸಲ್ಲಿಸುವಾಗ ಜೊತೆಗಿದ್ದ ಗಡ್ಡಧಾರಿ ಯಾರು?
ಮಹತ್ ಕಾರ್ಯಗಳ ಸಮಯ ನಿಗದಿ ಪಡಿಸೋದು ಇವರೇ?

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಮೋದಿ ಪಕ್ಕದಲ್ಲಿ ಒಬ್ಬ ಗಡ್ಡಧಾರಿ ಒಬ್ಬರು ಕಾಣಿಸಿಕೊಂಡರು. ಮೋದಿ ನಾಮಿನೇಶನ್‌ ಮಾಡುವ ವೇಳೆ ಅವರ ಪಕ್ಕದಲ್ಲಿ ಕುಳಿತವರು ಯಾರು ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.

ಪ್ರಧಾನಿ ಮೋದಿ ಆಚರಣೆಯ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.  ಅವರು ಯಾವುದೇ ಕೆಲಸವನ್ನು ಮಾಡುವಾಗ ಒಳ್ಳೆಯ ಸಮಯವನ್ನು ನೋಡಿಕೊಂಡೆ ಕೆಲಸ ಮಾಡುತ್ತಾರೆ. ಹಾಗೆ ಪ್ರಧಾನಿ ಮೋದಿ ಮೂರನೇ ಬಾರಿ ವಾರಣಾಸಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಹ ಒಳ್ಳೆಯ ಸಮಯವನ್ನು ಜ್ಯೋತಿಷಿಗಳಿಂದ ಕೇಳಿದ್ದರು. ಆ ಮುಹೂರ್ತದಲ್ಲೇ ಮೋದಿ ನಾಮಪತ್ರ ಸಲ್ಲಿಸಿದರು. ಇಷ್ಟೇಲ್ಲಾ ಓಕೆ ಅವರ ಪಕ್ಕದಲ್ಲಿ ಬಿಳಿ ಗಡ್ಡವನ್ನು ಬಿಟ್ಟು ಕುಳಿತ ವ್ಯಕ್ತಿ ಯಾರು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

ಪ್ರಧಾನಿ ನರೇಂದ್ರ ಮೋದಿ ಪಕ್ಕದಲ್ಲಿ ಕುಳಿತ ವ್ಯಕ್ತಿ ಖ್ಯಾತ ಜ್ಯೋತಿಷಿ ಮತ್ತು ಅಂಕಗಣಿತ ತಜ್ಞ ಗಣೇಶ್ವರ ಶಾಸ್ತ್ರಿ ದ್ರಾವಿಡ್. ಇವರ ಹೆಸರನ್ನು ನೀವು ಅಯೋಧ್ಯಯ ರಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲೂ ಕೇಳಿರುತ್ತೀರಾ. ಇವರೇ ರಾಮಲಾಲಾ ದೇವಸ್ಥಾನದ ಭೂಮಿ ಪೂಜೆ ಮತ್ತು ಶಿಲಾ ಪೂಜೆಯ ಜೊತೆಗೆ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದ್ದರು.

ಪ್ರಧಾನಿ ಮೋದಿ ಇಂದು ನಾಮನಿರ್ದೇಶವನ್ನು ಮಾಡುವ ಸಮಯವನ್ನು ಸಹ ಗಣೇಶ್ವರ ಶಾಸ್ತ್ರಿ ನಿರ್ಧರಿಸಿದ್ದರು. ಇದರಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾರಣಾಸಿಯಿಂದ ಬೆಳಗ್ಗೆ 1.55ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಜ್ಯೋತಿಷ್ಯ ಮತ್ತು ವೇದಗಳಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ.

ಗಣೇಶ್ವರ ಶಾಸ್ತ್ರಿ ದ್ರಾವಿಡ್ ಕಾಶಿ ವಾಸಿ. ಇವರಿಗೆ ಜಗತ್ಗುರು ರಮಾನಂದಾಚಾರ್ಯ ಪ್ರಶಸ್ತಿ ಸಂದಿದೆ. ದಕ್ಷಿಣ ಭಾರತ ಮೂಲದ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ರಾಮಘಾಟ್ ಪ್ರದೇಶದ ಗಂಗಾ ತೀರದಲ್ಲಿರುವ ಸಂಸ್ಕೃತ ಶಾಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಶಾಲೆಯೂ ಅವರ ಮುತ್ತಜ್ಜನಿಂದ ನಿರ್ಮಿಸಲ್ಪಟ್ಟಿದೆ. ಅವರ ಸಹೋದರ ಪಂಡಿತ್ ವಿಶೇಶ್ವರ ಶಾಸ್ತ್ರಿ ಕೂಡ ಶಾಸ್ತ್ರಿಯವರೊಂದಿಗೆ ವಾಸಿಸುತ್ತಿದ್ದಾರೆ, ಅವರು ಸಹ ವಿದ್ವಾಂಸರು. ಗಣೇಶ್ವರ ಶಾಸ್ತ್ರಿ ಅವರು ಗ್ರಹ ಮತ್ತು ನಕ್ಷತ್ರಪುಂಜದೊಂದಿಗೆ ಜ್ಯೋತಿಷ್ಯದ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆ. 

ಗಣೇಶ್ವರ ಶಾಸ್ತ್ರಿ ಅವರ ಮುಕುಟಕ್ಕೆ ಪದ್ಮಭೂಷಣ ಪ್ರಶಸ್ತಿ ಸಹ ಸಂದಿದೆ. ಇವರು ಕಾಶಿಯಲ್ಲಿ ಬರೀ ಗಾಲಿನಲ್ಲಿ ನಡೆಯುತ್ತಾರೆ. ಮತ್ತು ಕಟ್ಟು ನಿಟ್ಟಿನ ನಿಯಮವನ್ನು ಪಾಲಿಸುತ್ತಾರೆ. ಇನ್ನು ಈ ತಂತ್ರಜ್ಞಾನ ಯುಗದಲ್ಲೂ ಇವರ ಬಳಿ ಮೊಬೈಲ್ ಇಲ್ಲ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!