IPL 2024: ಚೆನ್ನೈ ವಿರುದ್ಧ ಗೆದ್ದು RCB ಪ್ಲೇ ಆಫ್​ ಸೇರಲು ಇರುವ ಒಂದೇ ಒಂದು ಮಾರ್ಗ ‘18’
IPL 2024: ಚೆನ್ನೈ ವಿರುದ್ಧ ಗೆದ್ದು RCB ಪ್ಲೇ ಆಫ್​ ಸೇರಲು ಇರುವ ಒಂದೇ ಒಂದು ಮಾರ್ಗ ‘18’

ಮೇ 18ರಂದು ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳ ವಿಶ್ವಾಸಕ್ಕೆ ಕಾರಣವಾಗಿದೆ. ಏಕೆಂದರೆ ಮೇ 18 ರಂದು ಇದುವರೆಗೂ ಆರ್​ಸಿಬಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಸಿಎಸ್​ಕೆ ವಿರುದ್ಧ ನಡೆದ ಪಂದ್ಯ ಮಾತ್ರವಲ್ಲದೇ ನಾಲ್ಕು ಪಂದ್ಯಗಳಲ್ಲೂ ಬೆಂಗಳೂರು ಜಯ ಸಾಧಿಸಿದೆ.

ಐಪಿಎಲ್​ 2024ರ ಭಾಗವಾಗಿ ನಡೆಯಲಿರುವ 68ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗುತ್ತಿವೆ. ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಇತ್ತಂಡಗಳು ಸಿಲುಕಿವೆ. ಈ ನಡುವೆ ಉಭಯ ತಂಡಗಳ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಪ್ಲೇ ಆಫ್ ಸೇರಲು ಬೇಕಾದ ನಾನಾ ಲೆಕ್ಕಾಚಾರಗಳನ್ನು ಹಾಕಿ ಶೇರ್ ಮಾಡ್ತಿದ್ದಾರೆ.

ಈ ನಡುವೆಯೇ ಕೆಲ ಆರ್​ಸಿಬಿ ಅಭಿಮಾನಿಗಳು ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಮ್ಮದೇ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ತಮ್ಮ ಹೇಳಿಕೆಗೆ ಕೆಲ ಸಾಕ್ಷಿಗಳನ್ನು ಮುಂದಿಟ್ಟಿ ಸಮರ್ಥನೆಯನ್ನು ಮಾಡ್ತಿದ್ದಾರೆ.

ಹೌದು, ಮೇ 18ರಂದು ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳ ವಿಶ್ವಾಸಕ್ಕೆ ಕಾರಣವಾಗಿದೆ. ಏಕೆಂದರೆ ಮೇ 18 ರಂದು ಇದುವರೆಗೂ ಆರ್​ಸಿಬಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಸಿಎಸ್​ಕೆ ವಿರುದ್ಧ ನಡೆದ ಪಂದ್ಯ ಮಾತ್ರವಲ್ಲದೇ ನಾಲ್ಕು ಪಂದ್ಯಗಳಲ್ಲೂ ಬೆಂಗಳೂರು ಜಯ ಸಾಧಿಸಿದೆ.

2013 ರಲ್ಲಿ ಆರ್​ಸಿಬಿ ಮೇ 18 ರಂದು CSK ವಿರುದ್ಧ ಆಡಿದ ಪಂದ್ಯದಲ್ಲಿ ಗೆದ್ದಿತ್ತು. 2014ರ ಇದೇ ದಿನಾಂಕದಂದು ಅವರು ಸಿಎಸ್‌ಕೆಯನ್ನು ಸೋಲಿಸಿದ್ದರು. ಮತ್ತು 2016 ರಲ್ಲಿ ಮೇ 18 ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಆರ್​ಸಿಬಿ ಗೆಲುವು ಪಡೆದಿತ್ತು. ಇನ್ನು ಕಳೆದ ವರ್ಷ ಇದೇ ದಿನಾಂಕದಂದು ಆರ್‌ಸಿಬಿ ತಂಡ ಎಸ್‌ಆರ್‌ಎಚ್‌ ತಂಡವನ್ನು ಸೋಲಿಸಿತ್ತು. ಆರ್​ಸಿಬಿ ಈಗ ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಹೀಗಾಗಿ ಈ ಬಾರಿಯೂ ಗೆಲುವು ಆರ್ ಸಿಬಿ ತಂಡದ್ದು ಎಂಬ ವಾದವನ್ನು ಅಭಿಮಾನಿಗಳು ಮುಂದಿಡುತ್ತಿದ್ದಾರೆ.

ಮೇ 18 ರಂದು ನಡೆದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೇ 18 ರಂದು ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಔಟಾಗದೆ ಸಿಎಸ್​ಕೆ ವಿರುದ್ಧ 29 ಎಸೆತಗಳಲ್ಲಿ 56 ರನ್, 29 ಎಸೆತಗಳಲ್ಲಿ 27 ರನ್, ಪಂಜಾಬ್ ಕಿಂಗ್ಸ್ ವಿರುದ್ಧ 50 ಎಸೆತಗಳಲ್ಲಿ 113 ರನ್ ಗಳಿಸಿದ್ದರು. ಕಳೆದ ಆವೃತ್ತಿಯಲ್ಲಿ ಎಸ್​​ಆರ್​ಎಚ್​ ವಿರುದ್ಧ 63 ಎಸೆತಗಳಲ್ಲಿ 100 ರನ್ ಸಿಡಿಸಿದ್ದರು. ಹಾಗಾಗಿ ಮೇ 18 ರಂದು ಕಿಂಗ್ ಕೊಹ್ಲಿ, ಮೂರನೇ ಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ಭವಿಷ್ಯ ಹೇಳ್ತಿದ್ದಾರೆ.

ಮತ್ತೊಂದು ಕುತೂಹಲಕಾರಿ ಅಂಶವೆಂದರೆ 2024 ಆವೃತ್ತಿಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಕನಿಷ್ಠ 18 ರನ್‌ಗಳಿಂದ ಗೆದ್ದರೆ, ಸಿಎಸ್‌ಕೆ ನೆಟ್ ರನ್ ರೇಟ್ ಅನ್ನು ಮೀರಿಸಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಲಿದೆ. 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದರೆ ಆರ್‌ಸಿಬಿ 18.1 ಓವರ್‌ಗಳಲ್ಲಿ ಗುರಿ ತಲುಪ ಬೇಕಿದೆ. ಇಲ್ಲಿಯೂ ಕೂಡ 18 ಸಂಖ್ಯೆ ಆರ್​ಸಿಬಿ ಪ್ಲೇ ಆಫ್ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ.

ಇದಕ್ಕಿಂತ ಮುಖ್ಯ ವಿಚಾರ ಎಂದರೇ ವಿರಾಟ್ ಕೊಹ್ಲಿ ಜೆರ್ಸಿ ನಂಬರ್ ಕೂಡ 18 ಆಗಿದ್ದು, ಕಿಂಗ್ ಕೊಹ್ಲಿ ತಂಡದ ಗೆಲುವಿಗೆ ಪ್ರಮುಖ ಕೊಡುವೆ ನೀಡುತ್ತಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಗೆ ಗೆಲುವು ಖಚಿತ, ಪ್ಲೇ ಆಫ್ ಪ್ರವೇಶಿಸುವುದು ಉಚಿತ ಅಂತ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಇನ್ನು ತಂಡದ ಸಾರಥ್ಯ ವಹಿಸಿರುವ  ಕಿಂಗ್ ವಿರಾಟ್ ಕೊಹ್ಲಿಯ ಜೆರ್ಸಿ ಸಂಖ್ಯೆ ೧೮ ಎಂಬುದು ವಿಶೇಷ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!