ಸಾವು ಗೆದ್ದ ಪೋರ..! ಆಪರೇಷನ್  'ಸಾತ್ವಿಕ್'  ಸಾರ್ಥಕ
ಕೊಳವೆ ಬಾವಿಯಲ್ಲಿ ಬಿದ್ದಿದ್ದ ಸಾತ್ವಿಕ್‌ ಸುರಕ್ಷಿತ
ಬಾಲಕ ಬದುಕುಳಿಯುವ ಪ್ರಾರ್ಥನೆಗೆ ಫಲ

  • ಕೊನೆಗೂ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ರಕ್ಷಣೆ
  • ಲಚ್ಯಾನ ಗ್ರಾಮದ ತೋಟದಲ್ಲಿ ನಿನ್ನೆ ಸಂಜೆಯಿಂದ ನಿರಂತರ ರಕ್ಷಣಾ ಕಾರ್ಯ
  • ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ ಸಾವನ್ನೇ ಗೆದ್ದು ಬಂದ ಮೇಲೆ ಸಂಭ್ರಮ

ಎರಡು ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆ ನಡೆದಿದ್ದು ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆದಿದೆ. ನಿನ್ನೆ(ಏ.03) ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿತ್ತು. ಸತೀಶ್ ಹಾಗೂ ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ನಿನ್ನೆ ಸಂಜೆ ೬ ಗಂಟೆ ಸುಮಾರಿಗೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದ.

 

ಕೊಳವೆ ಬಾವಿಗೆ ಬಿದ್ದಿರುವ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಕೊಳವೆ ಬಾವಿಗೂ ಸಿಬ್ಬಂದಿ ತೋಡಿದ ಹಳ್ಳಕ್ಕೂ ಸಂಪರ್ಕ ದೊರೆತಿದೆ. ಸತತ ೨೦ ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆದಿತ್ತು. ಜೊತೆಗೆ ಕೊಳವೆ ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೂಡ ಕೇಳಿ ಬಂದಿದ್ದು ರಕ್ಷಣೆ ಯಶಸ್ವಿಯಾಗಿದೆ.

ಸಾವುಗೆದ್ದ ಸಾತ್ವಿಕ್ ನನ್ನು ವೈದ್ಯರ ತಂಡ ಆಂಬ್ಯುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. ಇನ್ನಾದರೂ ತೆರೆದ ಕೊಳವೆ ಬಾವಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಜಾಗೃತಿ ಮೂಡಬೇಕಾಗಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!