ಸಸಿಹಿತ್ಲುವಿನಲ್ಲಿ ಕಡಲು ಪಾಲಾದ ಯುವಕನ ಶವ ಹೆಜಮಾಡಿಯಲ್ಲಿ ಪತ್ತೆ.!!
ಮರುವಾಯಿ ಹೆಕ್ಕಲು ಹೋಗಿ ಸಮುದ್ರ ಪಾಲು - ಯುವಕನ ಶವ ಪತ್ತೆ

ವರದಿ: ಸುರೇಶ್ ಎರ್ಮಾಳ್

ಸಸಿಹಿತ್ಲು : ಕಳೆದ ಮೂರು ದಿನಗಳ ಹಿಂದೆ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆ ಬಾಗಿಲಲ್ಲಿ ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ಸಮುದ್ರ ಪಾಲಾದ ಯುವಕನ ಶವ ಹೆಜಮಾಡಿ ಕೋಡಿ ಸಮುದ್ರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ಶವವಾಗಿ ಪತ್ತೆಯಾದ ಯುವಕ ಬಜಪೆ ಅದ್ಯಪಾಡಿ ಹಳೆ ವಿಮಾನ ನಿಲ್ದಾಣ ಬಳಿ ನಿವಾಸಿ  ಅಭಿಲಾಶ್(24).

ಈತ ಮಂಗಳೂರು ರೈಲ್ವೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಾಹಿಸುತ್ತಿದ್ದು, ತನ್ನ ಸುಮಾರು ಹತ್ತು ಮಂದಿ ಗೆಳೆಯರೊಂದಿಗೆ ಮುಲ್ಕಿಯ ಕೊಳಚಿ ಕಂಬಳ ಶಾಂಭವಿ ಹೊಳೆಗೆ ಮರುವಾಯಿ ಚಿಪ್ಪು ಹಾಗೂ ಏಡಿ ಹಿಡಿಯಲು ಬಂದಿದ್ದು,  ಅಲ್ಲಿ ಹೊಳೆಯಲ್ಲಿ ನೀರಿನ ಇಳಿತ ಇದ್ದ ಕಾರಣ ಮುಂದೆ ಸುಮಾರು ಎರಡು ಕೀ.ಮಿ. ನಡೆದುಕೊಂಡು ಹೋಗಿ  ಸಸಿಹಿತ್ಲು ಅಳಿವೆ ಬಳಿ ಸಮುದ್ರಕ್ಕಿಳಿದು ತೆರೆಯ ಅಬ್ಬರಕ್ಕೆ ಈತ ನೀರು ಪಾಲಾಗಿದ್ದ.

ಬಹಳಷ್ಟು ಮುಳುಗು ತಜ್ಞರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಇದೀಗ ಹೆಜಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳೀಯ ಯುವಕರು ಶವವನ್ನು ದಡ ಸೇರಿಸಿದ್ದು, ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!