ಮಕ್ಕಳಿಗೆ ಬೈಕ್ ಕೊಡುವ ಮುನ್ನ ಎಚ್ಚರ..! ತಂದೆಗೆ ೨೫ ಸಾವಿರ ದಂಡ
ಬೈಕ್‌ ಚಾಲನೆ ಮಾಡಿದ ಅಪ್ರಾಪ್ತ
ತಂದೆಗೆ 25,000 ರೂ. ದಂಡ ವಿಧಿಸಿ ಆದೇಶ

ಶಿವಮೊಗ್ಗ: ಅಪ್ರಾಪ್ತನೊಬ್ಬ ದ್ವಿಚಕ್ರ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ತನ್ನ ಮಗನಿಗೆ ತಂದೆಯೇ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ತೀರ್ಥಹಳ್ಳಿ ನ್ಯಾಯಾಲಯವು ತಂದೆಗೆ 25,000 ರೂ. ದಂಡ ವಿಧಿಸಿದೆ. ದ್ವಿಚಕ್ರ ವಾಹನ ಚಾಲನೆ ಮಾಡಿದ 17 ವರ್ಷದ ಅಪ್ರಾಪ್ತ ಮೂಲತಃ ತೀರ್ಥಹಳ್ಳಿಯವನು ಎಂದು ತಿಳಿದುಬಂದಿದೆ.

ತೀರ್ಥಹಳ್ಳಿ ಟೌನ್ ದೊಡ್ಮನೆ ಕೇರಿ ಬಳಿಕ ಶಿವಮೊಗ್ಗ ಸಂಚಾರ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಿದ್ದ 17 ವರ್ಷದ ಅಪ್ರಾಪ್ತನನ್ನು ತಡೆದು ಪರವಾನಗಿ ಪರಿಶೀಲಿಸಿದರು.

ನಂತರ ಆತ ಅಪ್ರಾಪ್ತ ಮತ್ತು ಪರವಾನಗಿಯಿಲ್ಲದೇ ಬೈಕ್‌ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ಪೊಲೀಸರು ಆತನನ್ನ ಕೋರ್ಟ್‌ಗೆ ಹಾಜರು ಪರಿಡಿಸಿದ್ದರು. ಇದನ್ನು ಗಮನಿಸಿದ ತೀರ್ಥಹಳ್ಳಿ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ 25,000 ದಂಡ ವಿಧಿಸಿ ಆದೇಶಿಸಿತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!