ದ.ಕ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆ ನಿಲ್ಲಿಸಲು ಕಾಂಗ್ರೆಸ್ ಸರಕಾರ ಚಿಂತನೆ.!

ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ.!

ಮಂಗಳೂರು ನಗರ ಸೇರಿದಂತೆ ದಕ್ಷಿಣ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆ ಬಂದ್ ಮಾಡಿ ಸರಕಾರಿ ಬಸ್ ಸೇವೆಗೆ ಮಾತ್ರ ಅವಕಾಶ ನೀಡುವ ಕುರಿತು ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರದಲ್ಲಿ ಚಿಂತನೆ ನಡೆದಿದೆ.

ಏನಿದು ಹೊಸ ಬೆಳವಣಿಗೆ.? ಕಾಂಗ್ರೆಸ್ ಸರಕಾರ ಬಂದ ಕೂಡಲೇ ಹಿಂದೂ ವಿರೋಧಿ ಯೋಜನೆಗಳು, ಯೋಚನೆಗಳು ಬಂದೆ ಬಿಡ್ತಾ..! ಇಂತಹ ಹಲವು ಪ್ರಶ್ನೆಗಳು ಜನರಲ್ಲಿ ಮೂಡಿದೆ. ಆದರೆ ದ.ಕ ಜಿಲ್ಲೆಯಲ್ಲಿ ಖಾಸಗಿ ಬಸ್ ಬಂದ್.. ಈ ಒಂದು ಬೆಳವಣಿಗೆ ಏನು ಗೊತ್ತಾ.?

ಕರಾವಳಿಯಲ್ಲಿ ಕೋಮುವಾದ ಜಾಸ್ತಿಯಾಗಿದೆ ಇದನ್ನು ಮಟ್ಟಹಾಕುವ ಉದ್ದೇಶದಿಂದಲೇ ಖಾಸಗಿ ಬಸ್ ಸೇವೆ ರದ್ದು ಮಾಡಲು ಸರಕಾರ ಮುಂದಾಗಿದೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಕರಾವಳಿಯಲ್ಲಿ ಕೋಮುವಾದಕ್ಕೆ ಉತ್ತೇಜನ ಕೊಡುತ್ತಿದ್ದಾರೆ ಎನ್ನುವುದು ನೂತನ ಕಾಂಗ್ರೆಸ್ ಸರಕಾರದ ಆರೋಪ.

ಕರಾವಳಿಯಲ್ಲಿ ಲವ್ ಜಿಹಾದ್ ಮತಾಂತರದ ಕುರಿತು ಸಂಘಟನೆಗಳು ಹೆಚ್ಚಿನ ನಿಗಾ ಇಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಿಂದೂ ಹೆಣ್ಣುಮಕ್ಕಳು ಜಿಹಾದಿಗಳ ಕೈಗೆ ಸಿಕ್ಕಿ ಬಲಿಯಾಗ ಬಾರದು ಎನ್ನುವುದು ಕಾರ್ಯಕರ್ತರ ಉದ್ದೇಶ. ಆದರೆ ಖಾಸಗಿ ಬಸ್’ಗಳಲ್ಲಿ ಅನ್ಯಕೋಮಿನ ಯುವಕ ಯುವತಿಯರು, ವಿದ್ಯಾರ್ಥಿಗಳ ಓಡಾಟಕ್ಕೆ ಸಂಘಟನೆಗಳು ಅಡ್ಡಿಪಡಿಸಿ, ಹಿಂದೂ ಯುವತಿಯರ ರಕ್ಷಣೆ ಮಾಡಿರುವ ಅನೇಕ ಘಟನೆಗಳು ಜಿಲ್ಲೆಯಲ್ಲಿ ನಡೆದಿದೆ.

ಇಂತಹ ಘಟನೆಗಳಿಗೆ ಖಾಸಗಿ ಬಸ್ ಚಾಲಕರು ಮತ್ತು ಕಂಡೆಕ್ಟರ್’ಗಳೇ ಮೂಲ ಕಾರಣ, ಬಸ್ ಡ್ರೈವರ್ ಅಥವಾ ಕಂಡೆಕ್ಟರ್ ಹಿಂದೂ ಸಂಘಟನೆಗಳಿಗೆ ಮಾಹಿತಿ ಕೊಡುತ್ತಾರೆ ಎನ್ನುವುದು ಸರಕಾರಕ್ಕೆ ಗುಪ್ತಚರ ಇಲಾಖೆ ಮೂಲಕ ಬಂದಿರುವ ಮಾಹಿತಿ ಎನ್ನಲಾಗಿದೆ. ಖಾಸಗಿ ಬಸ್’ಗಳ ಬಹುತೇಕ ಡ್ರೈವರ್ ಮತ್ತು ಕಂಡೆಕ್ಟರ್ ಗಳು ಬಜರಂಗದಳ, ವಿಹೆಚ್’ಪಿ, ಹಿಂಜಾವೇ ಮುಂತಾದ ಹಿಂದುತ್ವ ಸಂಘಟನೆಗಳ ಸದಸ್ಯರಾಗಿದ್ದಾರೆ. ಈ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆಯನ್ನು ರದ್ದು ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಂಗಳೂರು ನಗರ, ಹೊರವಲಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 500ರಷ್ಟು ಅಧಿಕ ಖಾಸಗಿ ಬಸ್’ಗಳು ಸೇವೆ ನೀಡುತ್ತಿದೆ. ಖಾಸಗಿ ಬಸ್ ಸೇವೆ ರದ್ದು ಮಾಡಿದರೆ ಹೊಸದಾಗಿ ಅಷ್ಟೇ ಸಂಖ್ಯೆಯ ಸರಕಾರಿ ಬಸ್’ಗಳನ್ನು ಜಿಲ್ಲೆಗೆ ನೀಡುವ ಬಗ್ಗೆ ಸರಕಾರ ಯೋಚನೆ ಮಾಡಿದೆ ಎಂದು ತಿಳಿದುಬಂದಿದೆ.

ರಾಜ್ಯ ಕಾಂಗ್ರೆಸ್ ಸರಕಾರದ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್’ಗಳು ಕಣ್ಮರೆಯಾಗಿ ಸರಕಾರಿ ಬಸ್’ಗಳ ಓಡಾಟ ಮಾತ್ರ ಕಂಡುಬರಲಿದೆ. ಸರಕಾರಿ ಬಸ್’ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಮಹಿಳೆಯರು ಹೆಚ್ಚು ಲಾಭ ಪಡೆಯಬಹುದು ಎಂಬ ಲೆಕ್ಕಾಚಾರವೂ ಇದೆ

ಒಟ್ಟಾರೆಯಾಗಿ ಲವ್ ಜಿಹಾದ್ ಮತಾಂತರ ವಿರುದ್ಧ ಸಂಘಟನೆಗಳು ಹೆಚ್ಚು ನಿಗಾ ವಹಿಸುತ್ತಿರುವ ದಕ್ಷಿಣ ಕನ್ನಡದಲ್ಲಿ ಸರಕಾರ ಇಂತಹ ಯೋಜನೆ ತಂದರೆ ಜಿಹಾದಿಗಳಿಗೆ ಹಾಗೂ ಮತಾಂಧರರಿಗೆ ಅವಕಾಶ ಮಾಡಿಕೊಟ್ಟ ಹಾಗೆ ಹಾಗೂ ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿ ಎಲ್ಲಿಗೆ ತಲುಪುತ್ತೊ ಗೊತ್ತಿಲ್ಲ.!