ಎಮ್ಮೆ,ಕೋಣ ಕಡಿಯಬಹುದಾದರೆ ಹಸುಗಳನ್ನೇಕೆ ಕಡಿಯಬಾರದು? ಎಂದ ಸಚಿವ ವೆಂಕಟೇಶ್

ಎಮ್ಮೆ,ಕೋಣ ಕಡಿಯಬಹುದಾದರೆ ಹಸುಗಳನ್ನೇಕೆ ಕಡಿಯಬಾರದು?

ಸಚಿವ ಕೆ. ವೆಂಕಟೇಶ್ ಹೊಸದೊಂದು ಹೇಳಿಕೆ ನೀಡಿದ್ದಾರೆ. "ಎಮ್ಮೆ, ಕೋಣಗಳನ್ನು ಕಡಿಯಬಹುದು ಅಂತಾದರೆ ಹಸುಗಳನ್ನೂ ಏಕೆ ಕಡಿಯಬಾರದು?" ಅಂತ ಪ್ರಶ್ನಿಸಿದ ಘಟನೆ ನಡೆದಿದೆ. 

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ  ಕೆಲ ಯೋಜನೆಗಳಿಗೆ ಕೊಕ್ ಕೊಡಲಾಗಿತ್ತು. ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಸರ್ಕಾರದ ಕೆಲವು ಯೋಜನೆಗಳಿಗೆ ತಿಲಾಂಜಲಿ ಇಡುತ್ತಿದೆ. ಕರ್ನಾಟಕದಲ್ಲಿ  ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ  ಜಾರಿ ಮಾಡಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಗೆ ಕೊಕ್ ಕೊಡುವ ಸುಳಿವು ನೀಡಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಹೊಸದೊಂದು ಹೇಳಿಕೆ ನೀಡಿದ್ದಾರೆ. ಎಮ್ಮೆ, ಕೋಣಗಳನ್ನು ಕಡಿಯಬಹುದು ಅಂತಾದರೆ ಹಸುಗಳನ್ನೂ ಏಕೆ ಕಡಿಯಬಾರದು ಅಂತ ಪ್ರಶ್ನಿಸಿದ್ದಾರ

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಪಶುಸಂಗೋಪನ ಸಚಿವ ಕೆ. ವೆಂಕಟೇಶ್, ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಎಮ್ಮೆ, ಕೋಣಗಳನ್ನು ಕಡಿಯಬಹುದು ಅಂತಾದರೆ ಹಸುಗಳನ್ನೂ ಏಕೆ ಕಡಿಯಬಾರದು ಅಂತ ಪ್ರಶ್ನಿಸಿದ್ದಾರೆ.

ನಮ್ಮ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ ಎಂದ ಸಚಿವರು, ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು ಅಂತ ಹೇಳಿದ್ರು. ಸತ್ತ ಹಸುವಿನ ಮೃತದೇಹ ಎತ್ತಲು ನಮಗ್ಯಾರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವಿನ ದೇಹವನ್ನು ಎತ್ತಿಸಿ, ಗುಂಡಿತೋಡಿಸಿ ಹೂಳಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು ಅಂತ ತಮ್ಮ ಮನೆಯ ಕಥೆ ಹೇಳಿದ್ರು.