ಕಾಸರಗೋಡು: ಡ್ರಗ್ಸ್ ಸಹಿತ ಯುವಕನ ಬಂಧನ

ಕಾಸರಗೋಡು: ಡ್ರಗ್ಸ್ ಸಹಿತ ಯುವಕನ ಬಂಧನ

ಕಾಸರಗೋಡು: 7.374 ಗ್ರಾಂ ಎಂಡಿಎಂಎ ಮತ್ತು 21 ಗ್ರಾಂ ಗಾಂಜಾ ಸಹಿತ ಯುವಕನನ್ನು ಕಾಸರಗೋಡು ಅಬಕಾರಿ ಜಾರಿ ಮತ್ತು ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಬಕಾರಿ ನಿರೀಕ್ಷಕ ಪಿ.ಜಿ.ರಾಧಾಕೃಷ್ಣನ್ ಮತ್ತು ತಂಡ ಬಂಧಿಸಿದೆ.

ಬಂಧಿತನನ್ನು  ಅಣಂಕೂರು ಸುಲ್ತಾನ್ ನಗರದ ಅಬ್ದುಲ್ ಖಾದರ್ (28) ಎಂದು ಗುರುತಿಸಲಾಗಿದೆ. ಅಬಕಾರಿ ಗುಪ್ತಚರ ಮತ್ತು ತನಿಖಾ ಬ್ಯೂರೋ ನೀಡಿದ ಸುಳಿವು ಆಧರಿಸಿ ಆತನನ್ನು ಬಂಧಿಸಲಾಗಿದೆ.