ಪಾವಂಜೆ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

"ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸಿ": ಪ್ರಕಾಶ್ ಶೆಟ್ಟಿ

ಮುಲ್ಕಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದಲ್ಲಿ ಜ.19ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸಕ್ಕೆ ಪೂರ್ವಭಾವಿಯಾಗಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಲು ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಉಪಸಮಿತಿಗಳ, ಪದಾಧಿಕಾರಿಗಳ, ಸದಸ್ಯರ ಹಾಗೂ ಗ್ರಾಮಸ್ಥರ ಸರ್ವ ಸದಸ್ಯರ ಸಭೆ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ನಾನಿಲ್ ಮಾತನಾಡಿ ಜ.19ರಿಂದ 30 ರವರೆಗೆ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಸ್ವಯಂಸೇವಕರು ದೇವಸ್ಥಾನಕ್ಕೆ ಬರುವ ಭಕ್ತರೊಡನೆ ಪ್ರೀತಿ ವಿಶ್ವಾಸದಿಂದ ಬೆರೆತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

ಸಮಿತಿಯ ಜೊತೆ ಕಾರ್ಯದರ್ಶಿ ರಾಮದಾಸ ಪಾವಂಜೆ ರವರು ದೇವಸ್ಥಾನದ ಬ್ರಹ್ಮಕಲಶೋತ್ಸವ ದಿನಗಳಲ್ಲಿ ಸ್ವಯಂಸೇವಕರು ಮಾಡಬೇಕಾದ ಪಾತ್ರಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ವಹಿಸಿ ಮಾತನಾಡಿ ಗ್ರಾಮಸ್ಥರು, ಸ್ವಯಂಸೇವಕರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಿ ಮಾದರಿಯಾಗಬೇಕು ಎಂದು ಮನವಿ ಮಾಡಿದರು

ಸಭೆಯಲ್ಲಿ ಅರ್ಚಕರಾದ ವಾಸುದೇವ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪಿ. ಗೋಪಾಲಕೃಷ್ಣ ರಾವ್ ಕೊಳುವೈಲು, ಭಾಸ್ಕರ್ ಸಾಲ್ಯಾನ್,ಜ್ಯೋತಿ ರಾಮಚಂದ್ರ, ಸುಲೋಚನಾ, ರಘು ದೇವಾಡಿಗ, ಪ್ರಮೀಳಾ ಪೂಜಾರಿ,ಪಾವಂಜೆ ಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮ ಕಲಶೋತ್ಸವದ ದಿನಗಳಲ್ಲಿ ನಡೆಸಬೇಕಾದ ಸಿದ್ಧತೆಗಳ ಬಗ್ಗೆ ಸಮಿತಿಯ ಪದಾಧಿಕಾರಿಗಳಾದ ಸೀತಾರಾಮ ಭಟ್, ನರೇಂದ್ರ ಪ್ರಭು, ವಿನೋದ್ ಬೊಳ್ಳೂರು, ಶಿವಾನಂದ ಪ್ರಭು, ಕೇಶವ ಕಾಮತ್ ಮತ್ತಿತರರು ಮಾತನಾಡಿದರು.