'ಭಾರತೀಯ ಸೇನೆಯು ಭವಿಷ್ಯದ ಯುದ್ಧಕ್ಕಾಗಿ ಸಿದ್ಧ'.!

'ಭಾರತೀಯ ಸೇನೆಯು ಭವಿಷ್ಯದ ಯುದ್ಧಕ್ಕಾಗಿ ಸಿದ್ಧ'.!

ಚೀನಾದೊಂದಿಗಿರುವ ಪ್ರತ್ಯಕ್ಷ ಗಡಿರೇಖೆಯ ಮೇಲಿನ ಯಾವುದೇ ಕೃತ್ಯವನ್ನು ಎದುರಿಸಲು ಭಾರತೀಯ ಸೇನೆಯು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಉತ್ತರ ಗಡಿ ಭಾಗದ ಪರಿಸ್ಥಿತಿ ಸಾಮಾನ್ಯವಾಗಿದ್ದು, ವ್ಯವಸ್ಥೆಯ ಮೂಲಕ ಶಾಂತಿಯನ್ನು ಕಾಪಾಡಲು ಆವಶ್ಯಕವಿರುವ ಕ್ರಮಗಳನ್ನು ಕೈಕೊಳ್ಳಲಾಗಿದೆ. ಪ್ರತ್ಯಕ್ಷ ಗಡಿರೇಖೆಯಲ್ಲಿ ಗಟ್ಟಿಮುಟ್ಟಾದ ಸ್ಥಾನವನ್ನು ಕಾಯುವಾಗ ನಾವು ಯಾವುದೇ ಆಪತ್ಕಾಲೀನ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದರು.

ಇನ್ನು ನಮ್ಮ ಸೈನಿಕರಿಗೆ ರೀತಿಯ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಸಾಕಾಗುವಷ್ಟು ಪ್ರಮಾಣದಲ್ಲಿ ಪೂರೈಸಲಾಗುತ್ತಿದ್ದು, ಸ್ಥಳೀಯ ಆಡಳಿತ, ಇತರೆ ವಿಭಾಗಗಳು ಮತ್ತು ಸೈನ್ಯಗಳ ಸಂಯುಕ್ತ ಪ್ರಯತ್ನದಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.